ಕೀಟ ಜಗತ್ತು..!

Update: 2018-01-06 17:56 GMT

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಕೀಟಶಾಸ್ತ್ರ ವಿಭಾಗದಿಂದ ಡಾ.ಬಾಬುರಾಜೇಂದ್ರ ಪ್ರಸಾದ್ ಆವರಣದಲ್ಲಿ ಕಳೆದೆರಡು ದಿನದಿಂದ ನಡೆಯುತ್ತಿರುವ ಕೀಟಮೇಳದಲ್ಲಿ 5 ಸಾವಿರಕ್ಕೂ ಹೆಚ್ಚು ಕೀಟಗಳು ಒಂದೇ ವೇದಿಕೆಯಲ್ಲಿ ವೀಕ್ಷಿಸಬಹುದಾಗಿದೆ. ಇರುವೆ, ಜೀರುಂಡೆ, ಏರೋಪ್ಲೇನ್ ಚಿಟ್ಟೆಗಳು, ಜೇನು ನೊಣಗಳು, ಕೃಷಿ ಕ್ಷೇತ್ರಕ್ಕೆ ಉಪಯುಕ್ತ, ಹಾನಿಕಾರಕ ಕೀಟಗಳು ಸೇರಿದಂತೆ ನಾನಾ ಪ್ರಭೇದದ ಕೀಟಗಳು ನೋಡುಗರಲ್ಲಿ ಕುತೂಹಲ ಕೆರಳಿಸುತ್ತವೆ. ಕಳೆದೆರಡು ದಿನಗಳಿಂದ ನಡೆಯುತ್ತಿರುವ ಕೀಟಮೇಳವನ್ನು ಸುಮಾರು20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ರವಿವಾರ ಸಂಜೆ 6 ಗಂಟೆಗೆ ಕೀಟಮೇಳಕ್ಕೆ ತೆರೆ ಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor