ಮನೆಯ ಬಾಗಿಲು ಮುರಿದು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
Update: 2018-01-07 22:36 IST
ಮೈಸೂರು,ಜ.7: ಖದೀಮರು ಮನೆಯ ಬಾಗಿಲು ಮುರಿದು 5 ಲಕ್ಷಮೌಲ್ಯದ ಚಿನ್ನಾಭರಣವನ್ನು ದೊಚಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ವಿಜಯನಗರ 03 ನೇ ಹಂತದ ನಿವಾಸಿ ಶ್ರೀಧರ್ ಎಂಬುವವರ ಮನೆಯಲ್ಲೇ ಕಳ್ಳತನವಾಗಿರುವುದು. ಮುಂಜಾನೆ ಬೆಳಿಗ್ಗೆ 07-15 ಘಂಟೆಯಿಂದ ಮಧ್ಯಾಹ್ನ 2 ಗಂಟೆ ಒಳೆಗೆ ಕಳ್ಳರ ಕೈ ಚಳಕ ತೋರಿಸಿದ್ದಾರೆ ಎನ್ನಲಾಗಿದೆ. ಬೀಗ ಹಾಕಿದ್ದ ಮನೆಯ ಮುಂಬಾಗಿಲನ್ನು ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಬೆಡ್‍ರೂಂನ ಬೀರುವಿನ ಬಾಗಿಲನ್ನು ಅಲ್ಲೆ ಇಟ್ಟಿದ್ದ ಕೀಯಿಂದ ತೆಗೆದು ಆಲ್ಮೇರಾದಲ್ಲಿದ್ದ 396 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ 02 ಕೆ.ಜಿ.ಯಷ್ಟು ಬೆಳ್ಳಿಯ ಪದಾರ್ಥಗಳನ್ನು ಕಳ್ಳತನ ದೋಚಿ ಪರಾರಿಯಾಗಿದ್ದಾರೆ.
5,ಲಕ್ಷ ಮೌಲ್ಯದ ಚಿನ್ನಾಭರಣ ಎಂದು ಅಂದಾಜಿಸಲಾಗಿದ್ದು, ಶ್ರೀಧರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.