ಓ ಮೆಣಸೇ..

Update: 2018-01-08 07:21 GMT

ಎಸ್.ಎಲ್.ಭೈರಪ್ಪರ ಕಾದಂಬರಿಗಳು ಭಾರತೀಯ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿವೆ - ವೀರಪ್ಪ ಮೊಯ್ಲಿ, ಸಂಸದ

ನಿಮ್ಮ ಮೇಲೆ ಪ್ರಭಾವ ಬೀರಿರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

---------------------

ರಾಜಕಾರಣಿಗಳಿಗೆ ಪ್ರತ್ಯೇಕ ತರಬೇತಿಯ ಅಗತ್ಯವಿದೆ - ಯು.ಟಿ. ಖಾದರ್, ಸಚಿ

ದೇಶವನ್ನು ಪರಿಣಾಮಕಾರಿಯಾಗಿ ದೋಚುವ ಕುರಿತಂತೆ ತರಬೇತಿಯೇ?

---------------------

ಅಮಿತ್ ಶಾರನ್ನು ಮೀರಿಸುವ ಚಾಣಾಕ್ಷತೆ ಸಿ.ಎಂ.ಸಿದ್ದರಾಮಯ್ಯರಿಗಿದೆ - ದೇವೇಗೌಡ, ಮಾಜಿ ಪ್ರಧಾನಿ

ಚಾಣಾಕ್ಷತೆಯ ಮಾತು.

---------------------

ಪ್ರತೀ ಚುನಾವಣೆ ಬಂದಾಗಲೂ ಬಿಜೆಪಿ ಅಪಪ್ರಚಾರದ ಕೆಲಸ ಮಾಡುತ್ತಿದೆ - ರಮಾನಾಥ ರೈ, ಸಚಿವ

ಯಾವ ಕೆಲಸವೂ ಮಾಡದೆ ಇರುವ ತಮಗಿಂತ ವಾಸಿ.

---------------------

ನಾಯಿ ನಿಷ್ಠೆಗೆ ಹೆಸರಾದ ಪ್ರಾಣಿ - ಪ್ರಮೋದ್ ಮಧ್ವರಾಜ್, ಸಚಿವ

ನಾಯಿಗಳನ್ನೇ ಚುನಾವಣೆಗೆ ನಿಲ್ಲಿಸುವುದು ವಾಸಿ.

---------------------
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಎಂಬ ಎರಡು ಗುಂಪುಗಳಿವೆ - ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ

ಬಿಜೆಪಿಯಲ್ಲಿರುವ ಗುಂಪುಗಳನ್ನು ಮೊದಲು ಎಣಿಸಿ ಹೇಳಿ.

---------------------

ತ್ರಿವಳಿ ತಲಾಖ್‌ನಿಂದ ಮುಸ್ಲಿಂ ಮಹಿಳೆಯರಿಗೆ ಮುಕ್ತಿ ಸಿಗುವ ಕಾಲ ಹತ್ತಿರವಾಗಿದೆ - ನರೇಂದ್ರ ಮೋದಿ, ಪ್ರಧಾನಿ

ಗುಜರಾತ್ ಹತ್ಯಾಕಾಂಡದಲ್ಲಿ ತಾವು ಒದಗಿಸಿದ ಮುಕ್ತಿಯನ್ನು ಅವರಿನ್ನೂ ಮರೆತಿಲ್ಲ.

---------------------
ಅಮಿತ್ ಶಾಗೆ ಮತ್ತೆ ರಾಜ್ಯದಲ್ಲಿ ಬೆಂಕಿ ಹಚ್ಚಲು ಬಿಡುವುದಿಲ್ಲ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಅದರ ಹೊಣೆಯನ್ನು ಅವರು ತಮ್ಮ ಶಿಷ್ಯರಿಗೆ ಹೊರಿಸಿದ್ದಾರೆ.

---------------------

ಸಂವಿಧಾನ ವಿರೋಧಿಗಳು ಸಂಪುಟದಲ್ಲಿ ಇರಬಾರದು - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಸಂವಿಧಾನ ವಿರೋಧಿಗಳು ದೇಶದಲ್ಲೇ ಇರಬಾರದು.

---------------------

ನಾನು ಮುಖ್ಯಮಂತ್ರಿಯಾದ ತಕ್ಷಣ ವಿಧಾನ ಸೌಧಕ್ಕಿರುವ ಕಬ್ಬಿಣದ ಗೇಟುಗಳನ್ನು ಕಿತ್ತು ಹಾಕಿಸುತ್ತೇನೆ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಅಷ್ಟಕ್ಕಾಗಿ ನಿಮ್ಮನ್ನು ಮುಖ್ಯಮಂತ್ರಿ ಮಾಡಬೇಕೇ?

---------------------

ಅಣ್ವಸ್ತ್ರದ ಬಟನ್ ನನ್ನ ಮೇಜಿನ ಮೇಲಿದೆ - ಕಿನ್ ಜಾಂಗ್ ಉನ್, ಉ.ಕೊರಿಯ ಅಧ್ಯಕ್ಷ

ಅಮೆರಿಕದ ಅಧ್ಯಕ್ಷ ಟ್ರಂಪ್ ಅದನ್ನು ಜೇಬಿನಲ್ಲಿ ಹಾಕಿಕೊಂಡು ಓಡಾಡುತ್ತಿದ್ದಾರಂತೆ.

---------------------

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಜೊತೆ ಕ್ರಿಕೆಟ್ ಸರಣಿ ಅಸಾಧ್ಯ - ಸುಶ್ಮಾ ಸ್ವರಾಜ್, ಕೇಂದ್ರ ಸಚಿವೆ

ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬರಬಹುದಾದರೆ, ಕ್ರಿಕೆಟ್ ಸರಣಿ ಯಾಕೆ ಅಸಾಧ್ಯ?

---------------------

ಯೋಧರ ತ್ಯಾಗ, ಬಲಿದಾನಕ್ಕೆ ಇಡೀ ದೇಶ ಹೆಮ್ಮೆ ಪಡುತ್ತಿದೆ - ರಾಜನಾಥ್ ಸಿಂಗ್, ಕೇಂದ್ರ ಸಚಿವ

ರಾಜಕಾರಣಿಗಳ ಮನೆಯಿಂದ ಹೋದ ಯೋಧರು ಎಷ್ಟಿದ್ದಾರೆ ಎಂದು ಲೆಕ್ಕ ಹೇಳುತ್ತೀರಾ?

---------------------

ಭಾರತದಲ್ಲಿ ಮತಾಂತರ ಎಂಬುದು ಕ್ಯಾನ್ಸರ್‌ನಂತೆ ಹರಡಿದೆ - ಸಿ.ಟಿ.ರವಿ, ಶಾಸಕ

ನಿಮ್ಮಂಥ ನಾಯಕರು ಧರ್ಮವನ್ನು ಪ್ರತಿನಿಧಿಸುತ್ತಿರುವಾಗ, ಧರ್ಮ ಬಿಟ್ಟು ಹೋಗದೆ ಮತ್ತೇನು ಮಾಡುತ್ತಾರೆ?

---------------------

ದೇವ ನಿರ್ಮಿತ ಸುಂದರ ಜಿಲ್ಲೆ ದಕ್ಷಿಣ ಕನ್ನಡ - ನಳಿನ್ ಕುಮಾರ್ ಕಟೀಲು, ಸಂಸದ

ಅದಕ್ಕಾಗಿ ಬೆಂಕಿ ಹಚ್ಚಲು ಹೊರಟಿರುವುದೇ?

---------------------

ರಾಷ್ಟ್ರೀಯ ಪಕ್ಷ ಎಂದರೆ ಹರಿಯುವ ನೀರು - ಶ್ರೀರಾಮುಲು, ಸಂಸದ

ಅದು ಹರಿಯುತ್ತಿರುವ ಚರಂಡಿ ನೀರು.

---------------------

ಮುಂದಿನ ಲೋಕಸಭೆ ಚುನಾವಣೆ ವೇಳೆ ರಜನಿಕಾಂತ್ ಎನ್‌ಡಿಎ ಸೇರಿಕೊಳ್ಳಲಿದ್ದಾರೆ -ತಮಿಳಿಸೈ, ತಮಿಳುನಾಡು ಬಿಜೆಪಿ ಅಧ್ಯಕ್ಷೆ

ಪ್ರಧಾನಿ ಸ್ಥಾನ ಕೊಟ್ಟರೆ ಸೇರಬಹುದೇನೋ?

---------------------

ಶೋಭಾ ಕರಂದ್ಲಾಜೆ ಕಾನೂನಿಗಿಂತ ದೊಡ್ಡವರಾ? - ರಾಮಲಿಂಗಾರೆಡ್ಡಿ, ಸಚಿವ

ಬಹುಶಃ ಕಾನೂನು ಹಾಗೆ ತಿಳಿದುಕೊಂಡಂತಿದೆ.

---------------------

ಆರೆಸ್ಸೆಸ್‌ನಿಂದಾಗಿ ಭಾರತೀಯರು ಸುರಕ್ಷಿತ - ಬಿ.ಕೆ.ಥಾಮಸ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ

ಗಂಡು ನವಿಲಿನ ಕಣ್ಣೀರಿಗಿಂತ ಈ ಹೇಳಿಕೆ ತಮಾಷೆಯಾಗಿದೆ.

---------------------

ನಾನೊಬ್ಬ ಫಕೀರ, ನನಗೆ ಅಧಿಕಾರ ಬೇಡ - ಅಣ್ಣಾ ಹಝಾರೆ, ಸಾಮಾಜಿಕ ಕಾರ್ಯಕರ್ತ

ನರೇಂದ್ರ ಮೋದಿಯವರೂ ತಮ್ಮನ್ನು ತಾವು ಫಕೀರ ಎಂದೇ ಕರೆದುಕೊಂಡಿದ್ದಾರೆ.

---------------------
ಗೋವು ಭಾರತದ ಪ್ರಾಣ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಅದಕ್ಕೆ ಬಾಯಿ ಬರುತ್ತಿದ್ದರೆ ಇಷ್ಟರಲ್ಲೇ ನಿಮ್ಮ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿರುತ್ತಿತ್ತು. 

---------------------

ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಬಿಡುವುದಿಲ್ಲ - ಮುರಳೀಧರ ರಾವ್, ರಾಜ್ಯ ಬಿಜೆಪಿ ಉಸ್ತುವಾರಿ

ಕರ್ನಾಟಕವನ್ನು ಇನ್ನೊಂದು ಉತ್ತರ ಪ್ರದೇಶ ಆಗಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...