ದಾವಣಗೆರೆ: ಇಬ್ಬರು ಕಳ್ಳರ ಬಂಧನ
ದಾವಣಗೆರೆ, ಜ.10: ಸರಗಳ್ಳತನ ಮತ್ತು ಮನೆ ಕಳುವು ಮಾಡುತ್ತಿದ್ದ ಅರೋಪಿಗಳನ್ನು ವಿದ್ಯಾನಗರ ಪೊಲೀಸ ಠಾಣೆ ಬಂಧಿಸಿ ಅವರಿಂದ ನಾಲ್ಕು ಬೈಕ್ ಹಾಗೂ 1.80 ಸಾವಿರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ವಶ ಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಡಾ. ಡಾ.ಭೀಮಾಶಂಕರ ಗುಳೇಧ ತಿಳಿಸಿದರು.
ಮುರ್ತುಜ್ ಖಾದ್ರಿ (35) ಹಾಗೂ ರವಿ (30) ಬಂಧಿತ ಆರೋಪಿಗಳು. ಇವರು ದಾವಣಗೆರೆ, ಕೊಪ್ಪಳ ಹಾಗೂ ಮಂಗಳೂರು ಸೇರಿದಂತೆ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದಾವಣಗೆರೆ ನಿವಾಸಿಗಳಾದ ಇವರು ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ಗಸ್ತುನಲ್ಲಿರುವಾಗ ಪೋಲಿಸರನ್ನು ನೋಡಿ ಭಯದಿಂದ ಓಡಿದ್ದಾರೆ. ಈ ವೇಳೆ ಇವರನ್ನು ಹಿಡಿದು ಬಂಧಿಸಿದಾಗ ವಿವಿಧ ಕಡೆ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಎಂ.ಬಾಬು ಕೆ.ಎಸ್.ಪಿ.ಎಸ್., ಪೊಲೀಸ್ ಉಪಾಧೀಕ್ಷಕರು ನಗರ ಉಪವಿಭಾಗ, ಇ.ಆನಂದ, ಸಿ.ಪಿ.ಐ ಕೇಂದ್ರ ವೃತ್ತರವರು ಇವರನ್ನು ಒಳಗೊಂಡ ತನಿಖಾಧಿಖಾರಿ ವಿದ್ಯಾನಗರ ಠಾಣೆಯ ಪಿ.ಎಸ್.ಐ. ರವರಾದ ಸಿದ್ದೇಶ್.ಎಂ.ಡಿ. ಹಾಗೂ ಸಿಬ್ಬಂದಿಯವರಾದ ಲೋಕಾನಾಯ್ಕ, ಮಂಜುನಾಥ, ತಿಪ್ಪೇಸ್ವಾಮಿ, ಆಂಜನೇಯ, ಸೈಯದ್ ಅಲಿ, ಅರುಣ್ ಕುಮಾರ್, ಬಸವರಾಜ, ನರೇಂದ್ರ ಸ್ವಾಮಿ, ಗೌರಮ್ಮ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ರಾಮಚಂದ್ರ ಜಾದವ್, ಚಾಲಕರಾದ ಸುರೇಶ ಇವರುಗಳನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ ಎಸ್. ಗುಳೇದ ಶ್ಲಾಘಿಸಿದ್ದಾರೆ.