ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ
Update: 2018-01-11 22:17 IST
ಮಂಡ್ಯ, ಜ.11: ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸದಸ್ಯರು, ಮಾದಿಗ, ಚಮ್ಮಾರ ಜನಾಂಗ ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯೆಯನ್ನು ಹೊಂದಿದ್ದು, ಮೀಸಲಾತಿಯಲ್ಲಿ ವಂಚಿತವಾಗಿ ಶೋಷಣೆಗೊಳಪಟ್ಟಿದೆ ಎಂದರು.
ಮಾದಿಕ, ಚಮ್ಮಾರ ಜನಾಂಗಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಉದ್ಯೋಗ, ಸಾಮಾಜಿಕ ಹಾಗು ರಾಜಕೀಯದಲ್ಲಿ ಒಳಮೀಸಲಾತಿ ಕಲ್ಪಿಸಲು ಎ.ಜೆ.ಸದಾಶಿವ ಆಯೋಗ ವರದಿ ಸೂಚಿಸಿದ್ದು, ಕೂಡಲೇ ಜಾರಿಗಾಗಿ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಒತ್ತಾಯಿಸಿದರು. ಸಮಿತಿಯ ಸಿ.ಕೆ.ಪಾಪಯ್ಯ, ಚಂದ್ರಶೇಖರ್, ಪುಟ್ಟಸ್ವಾಮಿ, ಸಿದ್ದರಾಜು, ಶ್ರೀನಿವಾಸ್, ಕೆಂಪಯ್ಯ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.