ಇಸ್ರೋ ಶತಕದ ಸಾಧನೆ...

Update: 2018-01-12 18:14 GMT

ಭಾರತದ ಬಾಹ್ಯಾಕಾಶ ಸಂಸ್ಥೆ 'ಇಸ್ರೋ' ಶುಕ್ರವಾರ ತನ್ನ 100ನೇ ಉಪಗ್ರಹ 'ಕಾರ್ಟೊಸ್ಯಾಟ್ 2'ನ್ನು ಕಕ್ಷೆಗೆ ಯಶಸ್ವಿಯಾಗಿ ಉಡ್ಡಯನ ಮಾಡಿದ್ದು ದೇಶದ ಬಾಹ್ಯಾಕಾಶ ಇತಿಹಾಸದಲ್ಲಿ ನೂತನ ಮೈಲುಗಲ್ಲನ್ನು ಸ್ಥಾಪಿಸಿದಂತಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದ ಉಡ್ಡಯನ ನೆಲೆಯಿಂದ ಬೆಳಗ್ಗೆ 9:29ಕ್ಕೆ ಇದ ಉಪಗ್ರಹ ಉಡ್ಡಯನ ರಾಕೆಟ್ ಪಿಎಸ್‌ಎಲ್‌ವಿ ಮೂಲಕ 'ಕಾರ್ಟೊಸ್ಯಾಟ್-2ನ್ನು' ಉಡಾವಣೆ ಮಾಡಲಾಗಿದೆ. ಕಾರ್ಟೊಸ್ಯಾಟ್-2 ಉಪಗ್ರಹದ ಜೊತೆ ಇತರ 30 ಉಪಗ್ರಹಗಳನ್ನೂ ಪಿಎಸ್‌ಎಲ್‌ವಿ ಅಂತರಿಕ್ಷಕ್ಕೆ ಹೊತ್ತೊಯ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor