ಯಾವುದೇ ಸಂಘಟನೆಯನ್ನು ನಿಷೇಧಿಸಲು ಸರಕಾರ ಆಲೋಚಿಸಿಲ್ಲ: ರಾಮಲಿಂಗಾ ರೆಡ್ಡಿ

Update: 2018-01-14 09:41 GMT

ಶಿವಮೊಗ್ಗ , ಜ.14: ಯಾವುದೇ ಸಂಘಟನೆಯನ್ನು ನಿಷೇಧಿಸಲು ರಾಜ್ಯ ಸರಕಾರ ಬಯಸಿಲ್ಲ. ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ. ಕೇಂದ್ರ ಸರಕಾರಕ್ಕೆ  ಮಾತ್ರ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ಇದೆ  ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ರಿಪ್ಪನ್ ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರಕ್ಕೆ ಸಂಘಟನೆಗಳನ್ನು ನಿಷೇಧಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ಅಧಿಕಾರ ಇದೆ. ಆದರೆ ಇದೀಗ ಯಾವುದೇ ಸಂಘಟನೆಯನ್ನು ನಿಷೇಧಿಸಲು ರಾಜ್ಯ ಸರಕಾರ ಆಲೋಚಿಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.

ಕರಾವಳಿಯಲ್ಲಿ ಆಗಾಗ ಕಂಡುಬರುವ ಅಹಿತಕರ ಘಟನೆಗಳಿಗೆ ಕೇವಲ ಒಂದು ಸಂಘಟನೆ ಕಾರಣವಾಗಿಲ್ಲ.  ಅಲ್ಲಿ  ನಡೆದಿರುವ ಗಲಾಟೆಯಲ್ಲಿ 

ಪಿಎಫ್ ಐ,  ಆರ್ ಎಸ್ ಎಸ್, ಬಜರಂಗ ದಳ , ಶ್ರೀರಾಮ ಸೇನೆ  ಮತ್ತಿತರ ಸಂಘಟನೆಗಳ ಕೈವಾಡ ಇದೆ  ಎಂದು ಅವರು ಆರೋಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News