ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮರಳು ದಾಸ್ತಾನು: ಕೇಸ್ ದಾಖಲು
Update: 2018-01-14 19:27 IST
ಶಿವಮೊಗ್ಗ, ಜ. 14: ಯಾವುದೇ ಪರವಾನಿಗೆಯಿಲ್ಲದೆ ಜಮೀನೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಮರಳು ದಾಸ್ತಾನು ಮಾಡಿದ್ದನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದಲ್ಲಿ ನಡೆದಿದೆ.
ಖಚಿತ ವರ್ತಮಾನದ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಪ್ರದೀಪ್ ಎಂಬವರು ಯಾವುದೇ ಪರವಾನಿಗೆಯಿಲ್ಲದೆ ಜಮೀನಿನ ವಿವಿಧೆಡೆ ಇತ್ತೀಚೆಗೆ ಭಾರೀ ಪ್ರಮಾಣದ ಮರಳು ದಾಸ್ತಾನು ಮಾಡಿದ್ದರು.
ಸರಿಸುಮಾರು 45 ಟ್ರ್ಯಾಕ್ಟರ್ ಲೋಡ್‍ನಷ್ಟು ಮರಳು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ 2.70 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.