×
Ad

ಮಡಿಕೇರಿ: ಎಸ್‍ಎಸ್‍ಎಫ್ ಜಿಲ್ಲಾ ಮಟ್ಟದ ಪ್ರತಿಭೋತ್ಸವ

Update: 2018-01-14 20:37 IST

ಮಡಿಕೇರಿ, ಜ.14 :ನಾಪೋಕ್ಲು ಸಮೀಪದ ಅಯ್ಯಂಗೇರಿಯಲ್ಲಿ ಎಸ್‍ಎಸ್‍ಎಫ್ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಪ್ರತಿಭೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.

ಜಮಾಅತ್ ಅಧ್ಯಕ್ಷ ಮಹಮದ್ ಹಾಜಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಅಯ್ಯಂಗೇರಿ ತಾಜುಲ್ ಉಲಾಮ ನಗರದಲ್ಲಿ ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಕರೀಂ ಪಾಳಿನಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಜೂನಿಯರ್, ಸೀನಿಯರ್, ಜನರಲ್, ಕ್ಯಾಂಪಸ್ ಒಳಗೊಂಡ ವಿಭಿನ್ನ ಏಳು ವಿಭಾಗಗಳ 94 ವೈವಿಧ್ಯಮಯ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಕ್ರುಟಿ ಉಸ್ತಾದ್, ರಫೀಕ್‍ ಸಖಾಫಿ, ಹಸೈನಾರ್ ಸಅದಿ ಅಬ್ದುಲ್‍ ರಹಮಾನ್, ಅಶ್ರಫ್‍ಪಿ.ಎ. ಮೊಹಿದಿನ್ ಕುಂಞ ಮಹಮದ್ ಪಿ.ಎಚ್, ಜಿಲ್ಲಾ ಕಾರ್ಯದರ್ಶಿ ರಫೀಕ್, ಉಪಾಧ್ಯಕ್ಷ ನಜೀರ್‍ ಬಾಖವಿ, ಹಮೀದ್ ಮುಸ್ಲಿಯಾರ್, ಶರೀಫ್‍ ಸೋಮವಾರಪೇಟೆ, ಅಜೀಜ್ ಸಖಾಫಿ ಕೊಡ್ಲಿಪೇಟೆ, ಮುಸ್ತಫ ಸಿದ್ದಾಪುರ ಉವೈಸ್ ನಿಜಾರ್ ಸಖಾಫಿ ಪಾಲ್ಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News