ಗುಬ್ಬಚ್ಚಿ ಗೂಡು, ಕಳಕಿನ ಜಗತ್ತು ಕೃತಿಗಳ ಲೋಕಾರ್ಪಣೆ

Update: 2018-01-14 15:15 GMT

ಮಂಡ್ಯ, ಜ.14: ನಗರದ ಗಾಂಧಿಭವನದಲ್ಲಿ ರವಿವಾರ ಬಾಚನಹಳ್ಳಿ ಬಾಮಶ್ರೀ ಪ್ರಕಾಶನ ಮತ್ತು ಶ್ರೀ ಮಹದೇಶ್ವರ ನೃತ್ಯ ಲಲಿತಕಲಾ ಅಕಾಡೆಮಿ ವತಿಯಿಂದ ಬಿ.ಎಂ. ಮಹದೇವ್‍ಮೂರ್ತಿ ಅವರ "ಗುಬ್ಬಚ್ಚಿ ಗೂಡು" ಮತ್ತು "ತಳಕಿನ ಜಗತ್ತು" ಕೃತಿಗಳ ಲೋಕಾರ್ಪಣೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಬಿ.ಸೋಮಶೇಖರ್, ನಿವೃತ್ತ ಉಪನ್ಯಾಸಕ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹದೇವಮೂರ್ತಿ ಅವರು ನಿವೃತ್ತಿ ನಂತರ ಸಾಹಿತ್ಯ ಕೃಷಿಯತ್ತ ಮುಖಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಇಂದು ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಬೇಕಿದ್ದು, ಶಿಕ್ಷಕರ ಬೋಧನಾ ಕೌಶಲ್ಯತೆ ವೃದ್ಧಿಸಬೇಕಿದೆ. ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮತ್ತು ಆವಿಷ್ಕಾರ ವಿಷಯಗಳ ಕುರಿತು ಅರಿವು ಮೂಡಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

ಕನ್ನಡ ಉಪನ್ಯಾಸಕ ಡಾ.ಕೆ. ಸಣ್ಣಹೊನ್ನಯ್ಯ ಕಂಟಲಗೆರೆ ಕೃತಿಗಳ ಕುರಿತು ಮಾತನಾಡಿದರು, ತುಮಕೂರಿನ ಸಿದ್ದೇಶ್ವರ ಕಾಲೇಜಿನ ಪ್ರಾಂಶುಪಾಲ ಲಿಂಗದೇವರು ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಶ್ರೀ ಮಹದೇಶ್ವರ ನೃತ್ಯ ಲಲಿತಕಲಾ ಅಕಾಡೆಮಿ ಸದಸ್ಯರು ಜಾನಪದ, ರಂಗಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.

ಬೆಂಗಳೂರಿನ ರಾಣಿ ಸರಳದೇವಿ ಕಾಲೇಜಿನ ಪ್ರಾಂಶುಪಾಲ ಸುರೇಂದ್ರಬಾಬು, ಲೇಖಕ ಬಿ,ಎಂ.ಮಹದೇವ್‍ಮೂರ್ತಿ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News