ಮಾನಸಿಕ ಒತ್ತಡ ನಿರ್ವಹಣೆ ರೂಢಿಸಿಕೊಳ್ಳಿ: ಶಾಸಕ ಅನ್ಸಾರಿ

Update: 2018-01-15 16:33 GMT

ಗಂಗಾವತಿ,ಜ.15: ಹದಿಹರೆಯದ ಪೀಳಿಗೆಗೆ ದೊಡ್ಡ ಶತ್ರುವಾಗಿರುವ ಮಾನಸಿಕ ಒತ್ತಡವನ್ನು ನಿರ್ವಹಿಸುವ ಕಲೆ ರೂಢಿಸಿ ಕೊಳ್ಳುವ ಅವಶ್ಯಕತೆ ಇದೆ ಎಂದು ಶಾಸಕರಾದ ಇಕ್ಬಾಲ್ ಅನ್ಸಾರಿಯವರು ಹೇಳಿದರು.

ಅವರು ತಮ್ಮ ಗೃಹ ಕಚೇರಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇಲಾಖೆಯ ‘ಯುವ ಸ್ಪಂದನ’ ಯೋಜ ನೆಯ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಮಾಹಿತಿ ಮತ್ತು ಸಾಮಾಜಿಕ ಜಾಲತಾಣಗಳ ಈ ದಿನಗಳಲ್ಲಿ ವಿಶೇಷವಾಗಿ ಯುವಕರಲ್ಲಿ ಒತ್ತಡ, ಉದ್ವೇಗಕ್ಕೆ ಈಡಾಗುವ ಕಳವಳಕಾರಿ ಅಂಶಗಳು ಕಂಡು ಬರುತ್ತಿವೆ. ಯುವಕರ ಈ ಸಮಸ್ಯೆ ಸಮರ್ಪಕವಾಗಿ ನಿರ್ವಹಿಸಲು ರಾಜ್ಯ ಸರಕಾರ ‘ಯುವ ಸ್ಪಂದನ’ ಯೋಜನೆ ಜಿಲ್ಲಾ ಮಟ್ಟದಲ್ಲಿ ಜಾರಿಗೊಳಿಸಿದೆ ಎಂದರು.

ಯುವ ಸ್ಪಂದನದ ಜಿಲ್ಲಾ ಯುವ ಸಮಾಲೋಚಕ ಭೀಮೆಶ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ಐದು ಜನ ಯುವ ಪರಿವರ್ತಕರು, ಓರ್ವ ಜಿಲ್ಲಾ ಯುವ ಸಮಾಲೋಚಕರು ಕಾರ್ಯನಿರ್ವಹಿಸುತ್ತಿದ್ದು 18 ರಿಂದ 35ರ ವಯೋಮಾನ ದವರ ವಿವಿಧ ಸಮಸ್ಯೆಗಳಿಗೆ ಪರಿಹಾರದ ಮಾಹಿತಿ, ಮಾರ್ಗದರ್ಶನ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಯುವ ಸ್ಪಂದನದ ಗಂಗಾವತಿ ಯುವ ಪರಿವರ್ತಕ ಮಂಜು ನಾಥ ದಾಸರ, ಮುಖಂಡ ರಾದ ಪರಮೇಶ ಬಡಿಗೇರ, ರುದ್ರೇಶ, ಹನುಮಂತಪ್ಪ ವನಬಳ್ಳಾರಿ, ರಮೇಶ ಪಾಟೀಲ್, ಬಾಷಾ ಹಿರೇ ಮನಿ ಇತರರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News