×
Ad

ತುಮಕೂರು: ರೈಲ್ವೇ ಪ್ರಯಾಣಿಕರ ವೇದಿಕೆಯ ಕ್ಯಾಲೆಂಡರ್ ಬಿಡುಗಡೆ

Update: 2018-01-15 22:10 IST

ತುಮಕೂರು.ಜ.15:ಬೆಂಗಳೂರು ರೈಲ್ವೇ ಪ್ರಯಾಣಿಕರ ವೇದಿಕೆಯ ನಾಲ್ಕನೇ ವರ್ಷದ ಪ್ರಸಕ್ತ 2018ನೇ ವರ್ಷದ ಪಾಕೆಟ್ ಕ್ಯಾಲೆಂಡರ್‍ನ್ನು ಅಪರ ಜಿಲ್ಲಾಧಿಕಾರಿ ಅನಿತಾ ತಮ್ಮ ಕಚೇರಿಯಲ್ಲಿ ದಿನದರ್ಶಿಕೆ ಬಿಡುಗಡೆ ಮಾಡಿದರು.

ದಿನದರ್ಶಿಕೆಯಲ್ಲಿ ಬೆಂಗಳೂರಿನಿಂದ ತುಮಕೂರು ಮೂಲಕ ಅರಸೀಕೆರೆ ಕಡೆಗೆ ಮತ್ತು ಅರಸೀಕರೆಯಿಂದ ಬೆಂಗಳೂರಿನ ಕಡೆಗೆ ಸಂಚರಿಸುವ ರೈಲುಗಳ ವೇಳಾಪಟ್ಟಿ ಇದೆ.ಇದರೊಂದಿಗೆ ತುಮಕೂರು ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಹಾಗೂ ಮಾಸಿಕ ಪಾಸುಗಳನ್ನು ನವೀಕರಿಸುವ ವೇಳೆ ಪ್ರಕಟಿಸಲಾಗಿದೆ. ತುಮಕೂರು ನಗರದ ಪ್ರಮುಖ ಆಸ್ಪತ್ರೆಗಳು ಮತ್ತು ಇತರ ತುರ್ತು ಅಗತ್ಯಗಳ ದೂರವಾಣಿ ಸಂಖ್ಯೆಗಳನ್ನು ಕೂಡಾ ನೀಡಲಾಗಿದೆ.ಅಲ್ಲದೆ ರೈಲಿನಲ್ಲಿ ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಮತ್ತು ನಡೆದುಕೊಳ್ಳಬೇಕಾದ ಬಗ್ಗೆ ಮಾಹಿತಿ,ಸೂಚನೆ ಇದೆ. ಇದಷ್ಟೇ ಅಲ್ಲದೆ ವೇದಿಕೆಯ ಕಾರ್ಯಚಟುವಟಿಕೆಗಳ ಬಗೆಗಿನ ಮಾಹಿತಿಯೂ ಇದೆ.

ಹತ್ತು ಸಾವಿರ ಪ್ರತಿ ಮುದ್ರಿಸಲಾಗಿದ್ದು, ತುಮಕೂರು, ಕ್ಯಾತ್ಸಂದ್ರದಿಂದ ಹೊರಡುವ ಪ್ರಯಾಣಿಕರಿಗೆ ರೈಲು ನಿಲ್ದಾಣಗಳಲ್ಲಿ ಹಾಗೂ ತುಮಕೂರು-ಬೆಂಗಳೂರು ನಡುವಿನ ಫಾಸ್ಟ್ ಪ್ಯಾಸೆಂಜರ್ ಹಾಗೂ ಅರಸೀಕರೆ-ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಉಚಿತವಾಗಿ ವಿತರಿಸಲಾಗುತ್ತದೆ.ವೇದಿಕೆಯ ಎಲ್ಲ ಕಾರ್ಯಕ್ರಮಗಳಿಗೆ ನಾಗರಿಕ ಪ್ರಯಾಣಿಕರು ಸ್ಪಂದಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆಯ ಕರ್ಣಂ ರಮೇಶ್,ನಿವೃತ್ತ ಅಧಿಕಾರಿ ರಘೋತ್ತಮರಾವ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News