ಇಂಡಿಯನ್ ಬುಕ್ ಆಫ್ ರೆಕಾರ್ಡ್ ಚಿತ್ರ ಕಲಾವಿದ ಹಮ್ದಿ ಇಮ್ರಾನ್ ಚಿತ್ರ ಪ್ರದರ್ಶನ

Update: 2018-01-16 08:51 GMT

ಹಾಸನ,ಜ.15: ಕಿರಿಯ ವಯಸ್ಸಿನಲ್ಲೇ ದೇಶದ ಪ್ರಖ್ಯಾತ ಇಂಡಿಯನ್ ಬುಕ್ ಆಪ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿ ಕೊಂಡಿರುವ ವರ್ಣಚಿತ್ರ ಕಲಾವಿದ ಹಮ್ದಿ ಇಮ್ರಾನ್ ಚಿತ್ರ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಯಿತು.

ಅವರು ಕಿರಿಯ ವಯಸ್ಸಿನಲ್ಲೇ ಅಂದರೆ 13 ವರ್ಷ 9 ತಿಂಗಳಲ್ಲಿ 400 ಕ್ಕೂ ಹೆಚ್ಚು ವರ್ಣಚಿತ್ರ ಗಳನ್ನು ರಚಿಸಿದ್ದಾರೆ. 

ಚಿಕ್ಕಮಗಳೂರು ಅಯ್ಯಪ್ಪ ನಗರ ನಿವಾಸಿ ಸಯ್ಯಿದಾ ಶಬಾನ ಮತ್ತು ಇಮ್ರಾನ್ ಪುತ್ರನಾಗಿದ್ದು. ವಾಸವಿ ವಿದ್ಯಾಲಯ ಶಾಲೆಯ ,9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹಮ್ದಿ ಇಮ್ರಾನ್, ನನಗೆ ಚಿತ್ರಕಲೆ ತುಂಬ ಖುಶಿ ಕೊಡುತ್ತದೆ. ವಿವಿಧ ಬಗೆಯ ವರ್ಣಚಿತ್ರ ಗಳನ್ನು ರಚಿಸಿದ್ದೇನೆ. ನನ್ನ ಚಿತ್ರಗಳನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ನನ್ನ ತಾಯಿ ಕಳುಹಿಸಿದ್ದರು. ರಾಷ್ಟ್ರೀಯ ಮಟ್ಟದ ದಾಖಲೆಯ ಪ್ರಸಕ್ತದಲ್ಲಿ ಹೆಸರು ಸೇರಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಂತೋಷ ತಂದಿದೆ ಎಂದರು.

ಕೆ ಟಿ ಶಿಸಪ್ರಸಾದ್ ಶ್ಲಾಘನೆ:  ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ ಟಿ ಶಿವಪ್ರಸಾದ್ ನಿವಾಸಕ್ಕೆ ತೆರಳಿ ಭೇಟಿಮಾಡಿದ ಹಮ್ದಿ ಇಮ್ರಾನ್ ಕುಟುಂಬ, ಹಮ್ದಿ ಚಿತ್ರಗಳನ್ನು ಪ್ರದರ್ಶಿಸಿದರು.

ಚಿತ್ರ ವೀಕ್ಷಣೆಯ ನಂತರ ದಸಂಸ ಮುಖಂಡ ಹೆತ್ತೂರ್ ನಾಗರಾಜ್, ಸಾಮಾಜಿಕ ಕಾರ್ಯಕರ್ತ ಮಲ್ನಾಡ್ ಮೆಹಬೂಬ್, ನಾಟಕ ನಿರ್ದೇಶಕ  
ಜಯಶಂಕರ್ ಬೆಲಗೂಂಡ ಕನಸು ಕನ್ನಡಿ ಕಿರು ಚಲನಚಿತ್ರ ನಟ ಸೇರಿದಂತೆ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News