ಕಾಂಗ್ರೆಸ್ ಪಕ್ಷದಿಂದ ಅಲ್ಪ ಸಂಖ್ಯಾತರ ಅಭಿವೃದ್ಧಿ: ಸಿ.ಎನ್.ಅಕ್ಮಲ್

Update: 2018-01-16 17:50 GMT

ಚಿಕ್ಕಮಗಳೂರು, ಜ.16: ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಜನರ ವಿಶ್ವಾಸವನ್ನು ಗಳಿಸಿದೆ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಕಿಸಾನ್ ಖೇತ್ ನ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ತಿಳಿಸಿದರು.

ನಗರದ ಟಿಪ್ಪು ನಗರದಲ್ಲಿ ಬಿಲಾಲ್ ನವ ಜವಾನ್ ಸಮೀತಿಯ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎಲ್ಲಾ ವರ್ಗದವರ ಏಳಿಗೆಗೆ ಶ್ರಮಿಸಿ ಪ್ರತಿಯೊಬ್ಬರ ವಿಶ್ವಾಸವನ್ನು ಪಡೆದು ಮತ್ತೊಮ್ಮೆ ಅಧಿಕಾರವನ್ನು ಹಿಡಿಯಲಿದೆ ಎಂದರು.

ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ 165 ರಲ್ಲಿ 158 ಕ್ಕು ಹೆಚ್ಚು ಭರವಸೆಗಳನ್ನು ಈಡೇರಿಸಿ ನಮ್ಮ ಕಾಂಗ್ರೆಸ್ ಸರ್ಕಾರ ಮಹಿಳೆಯರ, ದಲಿತರ, ಬಡವರ, ಅಲ್ಪ ಸಂಖ್ಯಾತರ, ಯುವಕರ ಹಾಗೂ ವಯೋವೃದ್ಧರಿಗೆ ಆಶಾ ಕಿರಣದ ಸರ್ವತೋನ್ಮುಖ ಏಳಿಗೆಗೆ ಶ್ರಮಿಸಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನ್ನ ಭಾಗ್ಯ ಯೋಜನೆಯ ಜೊತೆಗೆ ನಗರಕ್ಕೆ 2 ಇಂದಿರಾ ಕ್ಯಾಂಟೀನನ್ನು ನೀಡಲಿದೆ. ಇದರಿಂದ ಅಲ್ಪ ಸಂಖ್ಯಾತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕುಲವಾಗಲಿದೆ ಎಂದರು.

ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಮಾತನಾಡಿ ಜನರ ಸಮಸ್ಯೆಗಳಿಗೆ ಸದಾ ಕಾಲ ಸ್ಪಂದಿಸುವವರು ಒಂದು ದಿನ ಜನ ನಾಯಕರಾಗಿ ಬೆಳೆಯುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ನಯಾಜ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಶಾರಬ್, ಅಂಜುಮಾನ್-ಎ-ಇಸ್ಲಾಮಿಯ ಅಧ್ಯಕ್ಷರಾದ ನಾಜಿರ್ ಅಹಮದ್, ಗುರುಗಳಾದ ಖಾಜಾ ಹಜರತ್, ಏಕತಾ ವೇದಿಕೆಯ ಅಬ್ದುಲ್ ಪಾಷಾ, ಎನ್.ಎಸ್.ಯು.ಐ ನ ಆದಿಲ್, ಯುತ್ ಕಾಂಗ್ರೆಸ್ ಅಧ್ಯಕ್ಷ ರಾಹಿಲ್ ಶರೀಫ್, ಮುಖಂಡರಾದ ನೂರ್ ಅಹಮದ್ ರಾಮಣ್ಣ ಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News