ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಮ್ಯೂಸಿಕಲ್ ವೀಡಿಯೋ ಪ್ರಶಸ್ತಿ: ಸಿ.ಎಸ್. ಜಯಪ್ರಕಾಶ್

Update: 2018-01-16 17:54 GMT

ಹಾಸನ,ಜ.16: ಹಾಸನದ ಯುವಕರಿಂದ ತಯಾರಿಸಿದ ತುಮ್ ಜಹಾ ಭಿ ರಹೋ ಹಿಂದಿ ಮ್ಯೂಸಿಕಲ್‍ಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಮ್ಯೂಸಿಕಲ್ ವೀಡಿಯೋ ಪ್ರಶಸ್ತಿ ಲಭಿಸಿದೆ ಎಂದು ಪರಿಕಲ್ಪನೆ ಹಾಗೂ ನಿರ್ದೇಶನ ಮಾಡಿದ  ಸಿ.ಎಸ್. ಜಯಪ್ರಕಾಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಮ್ ಜಹಾ ಭಿ ರಹೋ ಹಿಂದಿ ಮ್ಯೂಸಿಕಲ್ ವೀಡಿಯೋವನ್ನು ಶೇಕಡ 80 ಭಾಗ ಹಾಸನದಲ್ಲೆ ಚಿತ್ರಿಕರಿಸಲಾಗಿದೆ. ಇದೊಂದು ದೇಶಭಕ್ತಿ ಬಿಂಬಿಸುವ ಹಾಗೂ ನಾವು ನಮ್ಮ ದೇಶದ ರೈತರು ಹಾಗೂ ಸೈನಿಕರಿಗೆ ಹೃದಯ ಪೂರ್ವಕವಾಗಿ ಅರ್ಪಿಸಲಾಗಿದೆ ಎಂದರು.

2017 ಅಕ್ಟೋಬರ್ 2ರ ಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಹುಟ್ಟು ಹಬ್ಬದ ಅಂಗವಾಗಿ ಬಿಡುಗಡೆ ಮಾಡಲಾಯಿತು. ಚಿತ್ರಕಲೆಗಾರ ಬಿ.ಎಸ್. ದೇಸಾಯಿ ಅವರು ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಬೆನ್ನಲುಬಾಗಿ ನಿಂತವರು ಹಾಸನದ ರೋಟರಿ ಹಾಗೂ ರೋಟರಾಕ್ಸ್ ಕ್ಲಬ್ ಆಫ್ ಹೊಯ್ಸಳ. ನಮ್ಮ ಪ್ರಯತ್ನಕ್ಕೆ ಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋ ಕೂಡ ಸಹಕರಿಸಿದೆ ಎಂದು ಹೇಳಿದರು. 

2017 ಡಿಸೆಂಬರ್ 10 ರಂದು ನಡೆದ 6ನೇ ಮುಂಬಯಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಮ್ಮ ಮ್ಯೂಸಿಕಲ್ ವೀಡಿಯೋಗೆ ಪ್ರಶಸ್ತಿ ಲಭಿಸಿತು. ಈ ಮ್ಯೂಸಿಕಲ್ ವೀಡಿಯೋದ ಸಂಗೀತ ಹಾಗೂ ಸಾಹಿತ್ಯವನ್ನು ಶಕೀಲ್ ಅಹಮದ್ ನಿರ್ವಹಿಸಿದರು. ಛಾಯಾಗ್ರಹಣ ಹಾಗೂ ಸಂಕಲನವನ್ನು ಎನ್. ಸುಹಾಸ್, ಕಲಾ ನಿರ್ದೇಶನವನ್ನು ಪ್ರಶಾಂತ್ ಆಚಾರ್ಯ, ಮುಖ್ಯ ಪಾತ್ರದಲ್ಲಿ ಅನೂಪ್, ನಿಶ್ಚಲ್ ದಂಬೆಕೋಡಿ ಮಾಡಿರುವುದಾಗಿ ಹೇಳಿದರು.

ಮ್ಯೂಸಿಕಲ್ ವೀಡಿಯೋದ ಸಂಗೀತ ಹಾಗೂ ಸಾಹಿತ್ಯವನ್ನು ಶಕೀಲ್ ಅಹಮದ್ ಮಾತನಾಡುತ್ತಾ, 2008ರಲ್ಲಿ ನಾನು ಸಾಹಿತ್ಯ ಬರೆದಿದ್ದೆನು. ಕಳೆದ ಒಂದು ವರ್ಷದಿಂದ ಈ ಮ್ಯೂಸಿಕಲ್ ನಿರ್ಮಿಸಲು ಶ್ರಮಪಟ್ಟಿದ್ದೇವೆ. ಪ್ರತಿ ವರ್ಷ ಇಂತಹದೊಂದನ್ನು ನಿರ್ಮಿಸಲು ನಮ್ಮ ತಂಡ ಸಜ್ಜಾಗಿರುತ್ತದೆ ಎಂದು ಹೇಳಿದರು. ಮುಂಬೈನಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಗಳಿಸುವ ಮೂಲಕ ಇದು 3ನೇ ಬಾರಿ ಪಡೆಯುತ್ತಿರುವ ಪ್ರಶಸ್ತಿ ಆಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಮುಂದೆ ಶಿವರಾಂ ಕಾರಂತರ ಯಕ್ಷಗಾನವುಳ್ಳ ಚೌಕಿ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಹೇಳಿದರು.

ತುಮ್ ಜಹಾ ಭಿ ರಹೋ ಹಿಂದಿ ಮ್ಯೂಸಿಕಲ್‍ಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಮ್ಯೂಸಿಕಲ್ ವೀಡಿಯೋ ಪ್ರಶಸ್ತಿ ಪಡೆದುದ್ದನ್ನು ಇದೆ ವೇಳೆ ಪ್ರದರ್ಶಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಛಾಯಗ್ರಹಣ ಹಾಗೂ ಸಂಕಲನ ಎನ್. ಸುಹಾಸ್, ಕಲಾ ನಿರ್ದೇಶನ ಪ್ರಶಾಂತ್ ಆಚಾರ್ಯ, ಮುಖ್ಯ ಪಾತ್ರದ ನಾಯಕ ಅನೂಪ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News