×
Ad

ಅಖಿಲ ಭಾರತ ವೀರಶೈವ ಮಹಾ ಸಭಾದ ಸದಸ್ಯತ್ವಕ್ಕೆ ಶೀಘ್ರವೇ ರಾಜೀನಾಮೆ: ಬಸವರಾಜ ಹೊರಟ್ಟಿ

Update: 2018-01-17 20:28 IST

ಮೈಸೂರು,ಜ.17: ಅಖಿಲ ಭಾರತ ವೀರಶೈವ ಮಹಾ ಸಭಾದ ಸದಸ್ಯತ್ವಕ್ಕೆ ಶೀಘ್ರವೇ ರಾಜೀನಾಮೆ ನೀಡುವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ಬಸವರಾಜ್ ಹೊರಟ್ಟಿ ಮೈಸೂರಿನ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರನ್ನ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದರು. ಶೀಘ್ರದಲ್ಲೇ ವೀರಶೈವ ಮಹಾಸಭಾದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮೈಸೂರು ಭಾಗದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಇಲ್ಲಿನ ಸ್ಥಳೀಯ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿ ಇಲ್ಲಿಯೇ ಲಿಂಗಾಯತ ಧರ್ಮ ಘೋಷಣೆಗೆ ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಚಿದಾನಂದ ಸ್ವಾಮೀಜಿಗಳ ಜೊತೆ ರಹಸ್ಯ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. 
 
ನಿನ್ನೆಯಷ್ಟೆ ಸುತ್ತೂರು ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಸಚಿವ ವಿನಯ್ ಕುಲಕರ್ಣಿ, ನಿನ್ನೆ ಸಂಜೆ ಹೊಸ ಮಠದ ಚಿದಾನಂದ ಸ್ವಾಮೀಜಿಗಳ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ಈಗ ಬಸವರಾಜ್ ಹೊರಟ್ಟಿ ತಡರಾತ್ರಿ ಇದೇ ಶ್ರೀಗಳ ಜೊತೆ ರಹಸ್ಯ ಮಾತುಕತೆ ನಡೆಸಿರುವುದು ಚೆರ್ಚೆಗೆ ಗ್ರಾಸವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News