ಪತಿ-ಪತ್ನಿ ಮೇಲೆ ಪೇದೆಯಿಂದ ಹಲ್ಲೆ ಆರೋಪ: ನೊಂದ ಮಹಿಳೆ ಆತ್ಮಹತ್ಯೆ ಯತ್ನ
ಸಕಲೇಶಪುರ,ಜ.17: ಪತಿ ಹಾಗೂ ಮಹಿಳೆಯ ಮೇಲೆ ವಿನಾಃ ಕಾರಣ ಸಾರ್ವಜನಿಕವಾಗಿ ಪೋಲಿಸ್ ಪೇದೆಯೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಮಹಿಳೆಯು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಬಿಸ್ಲೆ ಸಮೀಪದ ಅಡ್ಲಗದ್ದೆಯಲ್ಲಿ ನಡೆದಿದೆ.
ಪುಟ್ಟಮ್ಮ (60) ಪೋಲಿಸರ ದೌರ್ಜನ್ಯಕ್ಕೆ ಅಂಜಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆಯಾಗಿದ್ದಾಳೆ .ಯಸಳೂರು ಗ್ರಾಮ ಠಾಣೆಯ ಪೇದೆ ಮಣಿ ದಂಪತಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಗಳವಾರ ರಾತ್ರಿ 10ರ ಸಮಯದಲ್ಲಿ ಮನೆಯ ಮುಂದೆ ಪುಟ್ಟಮ್ಮಳೋಂದಿಗೆ ಮಾತನಾಡುತ್ತಿದ್ದ ಪತಿ ಮಲ್ಲಯ್ಯ (65) ಮೇಲೆ ಪೇದೆ ಕಾರಣವಿಲ್ಲದೆ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ಮಹಿಳೆಯ ಮೇಲೆಯೂ ಹಲ್ಲೆ ನಡೆಸಿದಲ್ಲದೆ ಬೆದರಿಕೆಗಳನ್ನು ಹಾಕಿ ಊರಿನಿಂದ ಹೊರೆಗೆ ಅಟ್ಟುತ್ತೇನೆ ಎಂದು ಹೆದರಿಸುತ್ತಾರೆ. ಸಾರ್ವಜನಿಕರ ಎದುರಾದ ಅವಮಾನದಿಂದ ಮಹಿಳೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಬಿಸ್ಲೆ ಅರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಸರಕಾರಿ ಅಸ್ಪತ್ರಗೆ ಸೇರಿಸಲಾಗಿದೆ. ಕಾರಣವಿಲ್ಲದೇ ದಂಪತಿಗಳ ಮೇಲೆ ಹಲ್ಲೆ ನಡೆಸಿರುವ ಪೋಲಿಸ್ ವಿರುದ್ದ ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಹಲ್ಲೆ ನಡೆಸಿಲ್ಲ: ಪ್ರಕರಣಕ್ಕೆ ಸಂಬಂದಿಸಿದಂತೆ ಯಸಳೂರು ಠಾಣೆ ಎಸ್ ಐ ದಯಾನಂದ್ ಪತ್ರಿಕೆಯೊಂದಿಗೆ ಮಾತನಾಡಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಮನೆಯ ಮುಂಬಾಗ ದಂಪತಿಗಳು ಜಗಳವಾಡುತ್ತಿದ್ದನ್ನು ಬಿಡಿಸಿ ದಂಪತಿಗಳಿಗೆ ಬುದ್ದಿವಾದ ಹೇಳಿ ಬಂದಿದ್ದಾರೆ.ಆದರೆ ಯಾವುದೇ ಹಲ್ಲೆ ನಡೆಸಿಲ್ಲ ಎಂದು ತಿಳಿಸಿದರು