ಮೈಸೂರು: ಸ್ವಪ್ರೇರಿತವಾಗಿ ಮತದಾನ ಮಾಡಿ ಉತ್ತಮ ನಾಯಕನನ್ನು ಆಯ್ಕೆ ಮಾಡಿ; ಡಿಸಿ ಡಿ.ರಂದೀಪ್

Update: 2018-01-17 18:40 GMT

ಮೈಸೂರು,ಜ.17: ಚುನಾವಣೆಯಲ್ಲಿ ಸ್ವಪ್ರೇರಿತವಾಗಿ ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಿ ಉತ್ತಮ ನಾಯಕರನ್ನು ಆಯ್ಕೆ ಮಾಡಿ  ಎಂದು ಜಿಲ್ಲಾಧಿಕಾರಿ ರಂದೀಪ್ ಡಿ ಅವರು ತಿಳಿಸಿದರು.    

ನಗರದ ಅವಿಲಾ ಕಾನ್ವೆಂಟ್‍ನಲ್ಲಿ ಬುಧವಾರ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ ಕಾರ್ಯಕ್ರಮದಡಿ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಬಡವ, ಶ್ರೀಮಂತ, ಧರ್ಮ, ಜಾತಿ ಯಾವುದೇ ಬೇಧವಿಲ್ಲದೇ ದೊರಕಿರುವ ಹಕ್ಕು ಮತದಾನದ ಹಕ್ಕು, ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ ಎಂದರು.

ನಾವು ಚುನಾಯಿಸುವ ಜನಪ್ರತಿನಿಧಿಗಳು ಸಮಾಜದ ಮುಖ್ಯವಾದ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರಿಂದ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಏಪ್ರಿಲ್ ಅಥವಾ ಮೇ ಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಯುವಶಕ್ತಿಯನ್ನು ನಮ್ಮ ದೇಶದ ಆಸ್ತಿ ಎನ್ನುತ್ತೇವೆ. 18 ವರ್ಷ ತುಂಬಿರುವ ಯುವಕರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ಮತದಾನ ಮಾಡಬೇಕು ಎಂದರು.

ಮತದಾನ ಮಾಡದೇ ಇದ್ದಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳನ್ನು ನಮಗೆ ಮೂಲಭೂತ ವ್ಯವಸ್ಥೆಯಲ್ಲಿ ತೊಂದರೆಯಾದಾಗ ನೈತಿಕವಾಗಿ ಪ್ರಶ್ನಿಸಲು ಸಹ ಸಾಧ್ಯವಾಗುವುದಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಮೊದಲು ಖಾತ್ರಿ ಮಾಡಿಕೊಳ್ಳಿ, ಇಲ್ಲದಿದ್ದಲ್ಲಿ ಅವಶ್ಯ ದಾಖಲೆಗಳನ್ನು ನೀಡಿ ಹೆಸರು ನೊಂದಾಯಿಸಿಕೊಂಡು ಮತದಾನ ಮಾಡಿ ಇದಕ್ಕಾಗಿ ಜನವರಿ 22 ರವರೆಗೆ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News