ಖಾಸಗಿ ಬಸ್‌ಗಳ ಈ ‘ವ್ಯವಸ್ಥೆ’ ನಿಲ್ಲಿಸಿ

Update: 2018-01-17 18:41 GMT

ಮಾನ್ಯರೇ,

ಮಂಗಳೂರು ನಗರದಲ್ಲಿ ಜನತೆ ಹೆಚ್ಚಾಗಿ ಖಾಸಗಿ ಬಸ್ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿದೆ. ಆದರೆ ಪ್ರತೀದಿನವೆಂಬಂತೆ ಈ ಬಸ್ ವ್ಯವಸ್ಥೆಯ ಬಗ್ಗೆ ಮಾಧ್ಯಮಗಳಲ್ಲಿ ದೂರುಗಳು ಬರುತ್ತಿದ್ದರೂ ಸುಧಾರಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ. ಜನಸಾಮಾನ್ಯರು ಅದರಲ್ಲೂ ಹಿರಿಯ ನಾಗರಿಕರು ಈ ಬಸ್‌ಗಳಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಒಂದು ಕಡೆಗೆಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ತಾವು ಹೋಗಬೆಕಾದ ಸ್ಥಳಕ್ಕೆ ಒಯ್ಯದೆ, ಪ್ರಯಾಣಿಕರನ್ನು ಅರ್ಧದಲ್ಲಿಯೇ ಇಳಿಸಿ ಇನ್ನೊಂದು ಬಸ್‌ನಲ್ಲಿ ಸಾಗಹಾಕುತ್ತಾರೆ. ತಾವು ಬಂದ ಬಸ್ಸು ತಮ್ಮ ಜಾಗ ತಲುಪಿಸೀತು ಎಂದು ಬಸ್ ಹತ್ತಿಕೊಳ್ಳುವ ವೃದ್ಧರು, ರೋಗಿಗಳು, ಗರ್ಭಿಣಿಯರು ಮತ್ತು ಸಣ್ಣ ಮಕ್ಕಳು ಈ ಅವ್ಯವಸ್ಥೆಯಿಂದ ತುಂಬಾ ತೊಂದರೆ ಆನುಭವಿಸಬೇಕಾಗುತ್ತದೆ. ಇದನ್ನು ಯಾರಾದರೂ ಪ್ರಶ್ನಿಸಿದರೆ ಬಸ್ ನಿರ್ವಾಹಕರಿಂದ ಉದ್ಧಟತನದ ಉತ್ತರ ದೊರೆಯುತ್ತದೆ.

ಹಲವು ಬಾರಿ ಈ ಸಮಸ್ಯೆಯ ಬಗ್ಗೆ ಸಂಬಂಧಿತ ಸಾರಿಗೆ ಅಧಿಕಾರಿಗಳು ಎಚ್ಚರಿಸಿದ್ದರೂ ಈ ಪಿಡುಗು ಇನ್ನೂ ನಿಂತಿಲ್ಲ. ಇನ್ನಾದರೂ ಪ್ರಯಾಣಿಕರಿಗೆ ಆಗುವ ಅನನುಕೂಲ ಮನಗಂಡು ಇಂತಹ ಪಿಡುಗನ್ನು ಶಾಶ್ವತವಾಗಿ ನಿಲ್ಲಿಸುವತ್ತ ಸಂಬಂಧಿತ ಅಧಿಕಾರಿಗಳು ಮನಸ್ಸು ಮಾಡಬೇಕಾಗಿದೆ.

Writer - ರಾಮನಾಥ್ ನಾಯಕ್, ಸುರತ್ಕಲ್

contributor

Editor - ರಾಮನಾಥ್ ನಾಯಕ್, ಸುರತ್ಕಲ್

contributor

Similar News