ಟೇಕ್ವಾಂಡೋ ತೀರ್ಪುಗಾರರ ಪರೀಕ್ಷೆ : ಕೊಡಗಿನ ನಾಲ್ವರು ಆಯ್ಕೆ

Update: 2018-01-18 12:01 GMT

ಮಡಿಕೇರಿ, ಜ.18 : ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ತೀರ್ಪುಗಾರರ ಪರೀಕ್ಷೆಯಲ್ಲಿ ಕೊಡಗಿನ ಟೇಕ್ವಾಂಡೋ ತರಬೇತಿ ಕೇಂದ್ರದ ನಾಲ್ಕು ಕ್ರೀಡಾ ಪಟುಗಳು ಉತ್ತೀರ್ಣರಾಗಿ ರಾಷ್ಟ್ರಮಟ್ಟದ ರೆಫ್ರೀಯಾಗಿ ಆಯ್ಕೆಯಾಗಿದ್ದಾರೆ. 

ಪ್ರತಿಕಾ ಹೇಳಿಕೆ ನೀಡಿರುವ ಕೊಡಗು ಜಿಲ್ಲಾ ಟೇಕ್ವಾಂಡೋ ಸ್ಫೋಟ್ಸ್ ಸಂಸ್ಥೆಯ ಅಧ್ಯಕ್ಷರಾದ ಬಿ.ಜಿ.ಲೋಕೆಶ್ ರೈ, ಜ. 5 ರಿಂದ 7ರ ವರೆಗೆ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ತೀರ್ಪುಗಾರರ ಪರೀಕ್ಷೆಯನ್ನು ನಡೆಸಲಾಗಿದ್ದು, ದೇಶದ ಇತರರ ರಾಜ್ಯಗಳಿಂದ ಸುಮಾರು 70 ರಷ್ಟು ಪರೀಕ್ಷಾರ್ಥಿಗಳು ಭಾಗವಹಿಸಿದ್ದರು.

ಕೊಡಗಿನ ಟೇಕ್ವಾಂಡೋ ಸ್ಫೋಟ್ಸ್ ಸಂಸ್ಥೆಯ ಕ್ರೀಡಾಪಟುಗಳಾದ ಬೈಲೆರಾ ಚವಿಕ್ಷಾ ವಿಶ್ವನಾಥ್ (14), ಕಟ್ರತನ ಧನಶ್ರೀ ವೆಂಕಟೇಶ್ (14), ಎನ್.ವರುಣ್ ನಾರಾಯಣ್ (14), ಅಂಗಿರ ವರುಣ್ ಗಣಪತಿ (14) ಪರಿಕ್ಷೇಯಲ್ಲಿ ಉತ್ತೀರ್ಣರಾಗಿ ರಾಷ್ಟ್ರಮಟ್ಟದ ರೆಫ್ರೀಯಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಪ್ರಮಾಣ ಪತ್ರವನ್ನು ನೀಡಲಾಗಿದ್ದು, ಕರ್ನಾಟಕದ ಅತೀ ಕಿರಿಯ ವಯಸ್ಸಿನ ರಾಷ್ಟ್ರೀಯ ತೀರ್ಪುಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News