ಸೊರಬ: ಕಾನೂನು ಉಲ್ಲಂಘಿಸಿದ ಅಂಗಡಿಗಳ ಮೇಲೆ ವೈದ್ಯಾಧಿಕಾರಿಗಳ ದಾಳಿ

Update: 2018-01-18 16:36 GMT

ಸೊರಬ,ಜ.18 : ತಂಬಾಕು ನಿಯಂತ್ರ ಕಾನೂನು ಉಲ್ಲಂಘಿಸಿ ತಂಬಾಕು, ಗುಟ್ಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ತಾಲೂಕು ವೈದ್ಯಾಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿ ಅಂಗಡಿ ಮಾಲೀಕರ ಮೇಲೆ ದಂಡ ವಿಧಿಸಿದರು. 

ಹೊಸಪೇಟೆ ಬಡಾವಣೆಯ ಚಂದ್ರಗುತ್ತಿ ರಸ್ತೆ, ಕಾಲೇಜು ರಸ್ತೆ ಹಾಗೂ ಸಾಗರ ರಸ್ತೆಯ ಅಂಗಡಿಗಳ ಮೇಲೆ ದಾಳಿ ನಡೆಸಿ 78 ಪ್ರಕರಣವನ್ನು ದಾಖಲಿಸಿಕೊಂಡು 2400 ರೂ. ದಂಡ ವಿಧಿಸಿದ್ದಾರೆ.  

ಅಂಗಡಿ ಮುಂಗಟ್ಟುಗಳ ಮಾಲೀಕರು ತಮ್ಮ ಅಂಗಡಿಯಲ್ಲಿ ‘ಧೂಮಪಾನ ನಿಷೇಧಿತ ಪ್ರದೇಶ’ ಇಲ್ಲಿ ಧೂಮಪಾನ ಮಾಡುವುದು ಅಪರಾಧ ಉಲ್ಲಂಘನೆಯಾದಲ್ಲಿ ರೂ.200 ರವರೆಗೆ ದಂಡ ವಿಧಿಸಲಾಗುವುದು, ಈ ಪ್ರದೇಶದಲ್ಲಿ ಧೂಮಪಾನ ಮಾಡುತ್ತಿರುವವರು ಕಂಡುಬಂದಲ್ಲಿ ಇವರಿಗೆ ದೂರು ಸಲ್ಲಿಸಿ ಎಂದು ತಾಲೂಕು ವೈದ್ಯಾಧಿಕಾರಿಗಳ ವಿಳಾಸ ನಮೂದಿಸಬೇಕು. 18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಕೂಡಾ ಕೆಲ ಅಂಗಡಿಗಳಲ್ಲಿ ನಿಯಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.  ಅವರಿಗೆ ಕಾನೂನು ಪಾಲನೆ ಮಾಡುವ ಬಗ್ಗೆ ತಿಳಿ ಹೇಳಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿಗಳು ಡಾ. ಗಾಯಿತ್ರಿ ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ, ಜಿಲ್ಲಾ ತಂಬಾಕು ಸಲಹಾ ಸಮಿತಿಯ ಹೇಮಂತರಾಜ್, ರವಿರಾಜ್, ಗಿರಿಮಲ್ಲಪ್ಪ ಮೊದಲಾವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News