ಮದ್ದೂರು: ಸರಕಾರಿ ನೌಕರರ ಪ್ರತಿಭಟನೆ

Update: 2018-01-18 17:16 GMT

ಮದ್ದೂರು, ನ.18: ಹೊಸ ಎನ್‍ಪಿಎಸ್ ಪಿಂಚಣಿ ವಿರೋಧಿಸಿ, ಹಳೇ ಪಿಂಚಣಿ ಯೋಜನೆಗೆ ಜಾರಿಗೆ ಒತ್ತಾಯಿಸಿ ಸರಕಾರಿ ನೌಕರರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ನೌಕರರ ಸಂಘದ ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ ನೌಕರರು, ಶಿರಸ್ತೇದಾರ್ ಮೂಲಕ ಸರಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆಯಲ್ಲಿ ಹಲವು ನೂನ್ಯತೆಗಳಿದ್ದು, ನಿವೃತ್ತ ನೌಕರರಿಗೆ ಅನ್ಯಾಯವಾಗಲಿದೆ. ಇದರಿಂದ ಲಕ್ಷಾಂತರ ಮಂದಿ ಪಿಂಚಣಿ ವಂಚಿತರಾಗುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರಕಾರಕ್ಕೆ ಹೊಸ ಪಿಂಚಣಿಯನ್ನು ತಿರಸ್ಕರಿಸುವ ಅವಕಾಶವಿದ್ದು, ಕೂಡಲೇ ಎನ್‍ಪಿಎಸ್ ಯೋಜನೆ ರದ್ದುಪಡಿಸಿ ಹಳೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಅವರು ಮುಖ್ಯಮಂತ್ರಿ ಅವರನ್ನು ಅವರು ಒತ್ತಾಯಿಸಿದರು.

ಸರಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷರಾದ ಎಚ್.ಎಸ್.ರವೀಶ್,  ವಿ.ಎಂ.ಶ್ರೀನಿವಾಸ್, ರಾಜ್ಯ ಪರಿಷತ್ ಸದಸ್ಯ ಎಸ್.ಕೆ.ತಮ್ಮೇಗೌಡ, ಹುಚ್ಚಯ್ಯ, ಚಂದ್ರಶೇಖರಯ್ಯ, ಜಯಲಿಂಗಯ್ಯ, ಚನ್ನಂಕೇಗೌಡ, ಮಂಜುನಾಥ್,  ಮಹೇಶ್, ಕುಮಾರ್, ನಾಗೇಶ್, ಎಚ್.ಎಸ್.ಶಿವರಾಮು, ಡಿ.ದೇವರಾಜು, ಟಿ.ಎಂ.ಕೆಂಪೇಗೌಡ, ಕೆ.ಸಿ.ಮಹೇಂದ್ರ, ಕುಮಾರ್, ಶಿವಲಿಂಗಯ್ಯ, ಗೋಪಾಲಕೃಷ್ಣ, ಶಿವಣ್ಣ, ನರೇಂದ್ರಬಾಬು, ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News