ಆಪ್ ನ 20 ಶಾಸಕರನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗ

Update: 2018-01-19 09:55 GMT

ಹೊಸದಿಲ್ಲಿ ,ಜ.19: ಲಾಭದಾಯಕ ಹುದ್ದೆ ಹೊಂದಿದ್ದ ದಿಲ್ಲಿಯ ಆಮ್ ಆದ್ಮಿ ಪಕ್ಷದ(ಆಪ್) 20 ಶಾಸಕರನ್ನು ಚುನಾವಣಾ  ಆಯೋಗವು ಅನರ್ಹಗೊಳಿಸಿ ರಾಷ್ಟ್ರಪತಿಗೆ ಶಿಪಾರಸ್ಸು ಮಾಡಿದೆ.

ಇದರೊಂದಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರಕಾರಕ್ಕೆ ಹಿನ್ನೆಡೆಯಾಗಿದೆ.  ಈ ಕಾರಣದಿಂದಾಗಿ ತೆರವಾಗುವ ಸ್ಥಾನಕ್ಕೆ ಉಪ ಚುನಾವಣೆ ಎದುರಾಗುವ ಸಾಧ್ಯತೆ ಇದೆ.

ಇದು ಮೋದಿ ನೇಮಕಗೊಳಿಸಿದ ಚುನಾವಣಾ  ಆಯೋಗ:  ಚುನಾವಣಾ ಆಯೋಗದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.ಇದು ಪ್ರಧಾನಿ 

ಮೋದಿ ನೇಮಕಗೊಳಿಸಿದ ಚುನಾವಣಾ  ಆಯೋಗ.  ಚುನಾವಣಾ ಆಯೋಗ ಶಾಸಕರ ಅನರ್ಹಗೊಳಿಸುವ ವಿಚಾರದಲ್ಲಿ ಚುನಾವಣಾ ಆಯೋಗ ಏಕಪಕ್ಷೀಯವಾಗಿ ನಡೆದುಕೊಂಡಿದೆ.ಶಾಸಕರಿಗೆ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿಲ್ಲ ಎಂದು ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೇಟ್  ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News