ಯುವಕರು ಹಾದಿ ತಪ್ಪದೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು: ಬಿ.ಬಿ.ರೇಣುಕಾರ್ಯ

Update: 2018-01-19 17:32 GMT

ಬಣಕಲ್, ಜ.19:ಯುವಕರು ಆಧುನಿಕ ವ್ಯವಸ್ಥೆಯಲ್ಲಿ ದಾರಿ ತಪ್ಪುತ್ತಿದ್ದಾರೆ. ಯಾವ ವ್ಯವಸ್ಥೆಯಿಂದ ದಾರಿ ತಪ್ಪುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಯುವ ಜನತೆ ನಾಯಕತ್ವ ಗುಣ ಬೆಳೆಸಿಕೊಂಡು ವ್ಯಕ್ತಿ ವಿಕಸನಗೊಳ್ಳಲು ಮಾರ್ಗದರ್ಶನದ ಅವಶ್ಯಕತೆಯಿದೆ. ಜೇಸಿಐ ಸಂಸ್ಥೆ ಇಂದಿನ ಯುವಕರನ್ನು ವ್ಯಕ್ತವಿಕಸನ ಮತ್ತು ನಾಯಕತ್ವದ ಗುಣ ಬೆಳೆಸಲು ಉತ್ತಮ ತರಬೇತಿ ನೀಡುತ್ತಿದೆ ಎಂದು ಆಲ್ದೂರು ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆಯ ಕಾರ್ಯಧರ್ಶಿ ಬಿ.ಬಿ.ರೇಣುಕಾರ್ಯ ಹೇಳಿದರು.

ಅವರು ಜನ್ನಾಪುರ ಸಮೀಪದ ಗವಿಕಲ್ ರೇಸಾರ್ಟ್‍ನಲ್ಲಿ ಹಮ್ಮಿಕೊಂಡಿದ್ದ ಜೆಸಿಐ ಗೋಣಿ ಬೀಡು ಹೊಯ್ಸಳದ ಪದವಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ಜೆಸಿಐ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದ್ದು, ಪ್ರತಿಯೊಬ್ಬ ಪ್ರಜೆಗೆ ವ್ಯಕ್ತಿ ವಿಕಸನ ಮತ್ತು ನಾಯಕತ್ವ ಗುಣ ಬೆಳೆಸಲು ಪ್ರಯತ್ನಿಸುತ್ತಿದೆ. ದೇಶಕ್ಕೆ ಉತ್ತಮ ಪ್ರಜೆಯಾಗಬೇಕಾದರೆ ತರಬೇತಿಯ ಅವಶ್ಯಕತೆಯಿದೆ. ಯುವಕರು ದಾರಿ ತಪ್ಪದೇ ಇಂತಹ ಪ್ರೋತ್ಸಾಹ ನೀಡುವ ಸಂಸ್ಥೆಗಳಿಗೆ ಸೇರಿ ತಮ್ಮ ಬದುಕನ್ನು ರೂಪಿಸಲು ಪ್ರಯತ್ನಿಸಬೇಕು ಎಂದು ನುಡಿದರು.

ಜೇಸಿಐ ಗೋಣಿಬೀಡು ಹೊಯ್ಸಳದ ಸಂಸ್ಥಾಪಕ ಅಧ್ಯಕ್ಷ ಡಾ.ಮೋಹನ್‍ರಾಜಣ್ಣ ಮಾತನಾಡಿದರು. ಹೆಚ್.ಸಿ.ತೇಜೇಶ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಐನ ವಲಯ ಉಪಾಧ್ಯಕ್ಷ್ಯೆ ಸಮತ ಮಿಸ್ಕಿತ್ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋದಿಸಿದರು. 

ಸಮಾರಂಭದಲ್ಲಿ ವಲಯಾಧ್ಯಕ್ಷ ವಿಕಾಸ್ ಗೂಗ್ಲಿಯಾ, ಗ್ರಾಪಂ ಸದಸ್ಯ ಜೆ.ಎಸ್.ಸುದೀರ್,ನೂತನ ಅಧ್ಯಕ್ಷ ಕೆ.ಡಿ.ಸುರೇಶ್, ನಿ.ಪೂ.ಅಧ್ಯಕ್ಷ ಎಂ.ಸಿ.ಗಣೇಶ್‍ಗೌಡ, ಹರೀಶ್ ಎಚ್.ಆರ್.ಚಾಂದಿನಿ, ಆಕಾಶ್, ಎಂ.ಸಿ.ಆದರ್ಶ್, ಆರ್.ಸತ್ಯಕುಮಾರ್, ಬಿ.ಕೆ.ಚಂದ್ರಶೇಖರ್, ಯೋಗೇಶ್‍ಕುಮಾರ್, ಸಂತೋಷ್, ವಿಕಾಸ್‍ ದ್ವಾರಕೀನಾಥ್, ಡಿ.ಡಿ.ರಮೇಶ್, ವೈಬಿ.ಸುಂದರೇಶ್, ಪೈರೋಜ್‍ ಅಹಮ್ಮದ್, ಪರಮೇಶ್, ರೆಹಮಾನ್, ರವಿಕುಮಾರ್, ಶಿರಿತ್, ಚನ್ನಕೇಶವ, ಕೆ.ಡಿ.ಜಗದೀಶ್, ಗಂಗಾಧರ್, ವಿರೇಂದ್ರ, ಪ್ರಹ್ಲಾದ್, ಪೂರ್ಣೇಶ್, ಬಸವರಾಜ್, ಮಗ್ಗಲಮಕ್ಕಿ ಗಣೇಶ್, ಜೆ.ಸಿ.ರಘು, ಎಂ.ವಿ.ಸುನಿಲ್‍ಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News