ಧಾರ್ಮಿಕತೆ, ಸಂಸ್ಕೃತಿ ಉಳಿದಿರುವುದು ಗ್ರಾಮೀಣ ಭಾಗದಲ್ಲಿ ಮಾತ್ರ: ಹೆಚ್.ಡಿ. ದೇವೇಗೌಡ

Update: 2018-01-19 17:44 GMT

ಕಡೂರು, ಜ.19: ಇತ್ತೀಚಿನ ದಿನಗಳಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ನಮ್ಮ ಸಂಸ್ಕೃತಿ , ನಮ್ಮ ಧರ್ಮ ಪಟ್ಟಣ ಪ್ರದೇಶಗಳಲ್ಲಿ ಮಾಯವಾಗುತ್ತಿದೆ. ಜನರು ಎಲ್ಲವನ್ನೂ ಮರೆತು ದೇವರು, ಸಂಸ್ಕೃತಿ , ಧರ್ಮ ಇವುಗಳು ಇಲ್ಲದಾಗುತ್ತಿವೆ. ಆದರೆ ಏನಾದರೂ ನಮ್ಮ ಹಿಂದಿನವರು ಆಚರಿಸಿಕೊಂಡು ಬಂದಿರುವ ಧರ್ಮ, ಸಂಸ್ಕೃತಿ , ನಮ್ಮತನ ಉಳಿಸಿಕೊಂಡು ಬಂದವರು ಗ್ರಾಮೀಣ ಭಾಗದ ಜನ ಮಾತ್ರ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತಿಳಿಸಿದರು. 

ಅವರು ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಶ್ರೀ ವಾಲ್ಮಿಕಿ ಆಂಜನೇಯಸ್ವಾಮಿ ದೇವಸ್ಥಾನದ ನೂತನ ರಾಜಗೋಪುರ, ವಿಮಾನ ಗೋಪುರದ ಕಳಸಾರೋಹಣ, ಸಮುದಾಯ ಭವನದ ಉದ್ಘಾಟನೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ದೈವವನ್ನು ನಂಬುವ ಕಾಲ ಹಳೆಯದಾಗಿದ್ದು, ಸಂಪ್ರದಾಯಗಳನ್ನು ಈಗಲೂ ಉಳಿಸಿಕೊಂಡು ಬಂದಿವವರು ಗ್ರಾಮೀಣ ಭಾಗದ ಜನತೆ. ನಮ್ಮ ಸಂಸ್ಕೃತಿ ಹಿಂದಿನ ನಡವಳಿಕೆಗಳು, ಆಚಾರ-ವಿಚಾರಗಳನ್ನು ಏನಾದರೂ ಮುಂದುವರೆಸಿಕೊಂಡು ಬಂದಿದ್ದರೆ ಅದು ಗ್ರಾಮೀಣ ಭಾಗದಲ್ಲಿ ಮಾತ್ರ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಶ್ರೀಪುರುಷೋತ್ತಮಾನಂದಪುರಿ ಸ್ವಾಮಿಗಳು, ಶ್ರೀ ಗುಣನಾಥ ಸ್ವಾಮಿಗಳು, ಶ್ರೀ ಈಶ್ವರಾನಂದ ಸ್ವಾಮಿಗಳು, ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಸ್ವಾಮಿಗಳು, ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾ ಸ್ವಾಮಿಗಳು, ಶಾಸಕ ವೈ.ಎಸ್.ವಿ.ದತ್ತ, ತಹಸೀಲ್ದಾರ್ ಶ್ರೀಮತಿ ಭಾಗ್ಯ, ಕೆ.ಎಂ.ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಸೀಗೆಹಡ್ಲು ಹರೀಶ್, ಬ್ಯಾಗಡೇಹಳ್ಳಿ ಬಸವರಾಜು, ಅನಂತ ಸುಬ್ಬರಾವ್, ಗುಡಿಗೌಡ ಸಿ.ಟಿ.ಲಕ್ಕಪ್ಪ, ಚಂದ್ರಶೇಖರಯ್ಯ, ಚೆಲುವಯ್ಯ, ಈಶ್ವರಪ್ಪ, ಕೃಷ್ಣಮೂರ್ತಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News