ದಾವಣಗೆರೆ: ಕಮ್ಯುನಿಷ್ಟ್ ಪಕ್ಷದ 23ನೇ ರಾಜ್ಯ ಸಮ್ಮೇಳನ ಅಂಗವಾಗಿ ಜೀಪ್ ಜಾಥಾ

Update: 2018-01-19 17:56 GMT

ದಾವಣಗೆರೆ,ಜ19: ಭಾರತ ಕಮ್ಯುನಿಷ್ಟ್ ಪಕ್ಷದ 23ನೇ ರಾಜ್ಯ ಸಮ್ಮೇಳನ ಜ.27 ರಿಂದ 30 ರವರೆಗೆ ದಾವಣಗೆರೆಯಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಇಪ್ಟಾ ತಂಡದವರಿಂದ ಹಮ್ಮಿಕೊಳ್ಳಲಾಗಿರುವ ಜೀಪ್ ಜಾಥಾಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ನಗರದ ಜಯದೇವ ವೃತ್ತದ ಬಳಿ ಸಿಪಿಐನ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ದೇಶದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಅವುಗಳಲ್ಲಿ ಪ್ರಮುಖವಾದದು ಬಡತನ, ನಿರುದ್ಯೋಗ ಸಮಸ್ಯೆ, ರೈತ , ಕೃಷಿ, ಮಹಿಳಾ, ಅಸಂಘಟಿತ ಕಾರ್ಮಿಕರನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಡೆಗಣಿಸುತ್ತಾ ಬಂದಿವೆ. ಕಾರ್ಮಿಕ ಪರವಾದ ಹಲವು ಕಾನೂನುಗಳನ್ನು ಕೇಂದ್ರ ರದ್ದುಗೊಳಿಸಿ, ಮಾಲಿಕರ ಹಾಗೂ ಕಾರ್ಪೋರೆಟ್ ವಲಯಕ್ಕೆ ಅನುಕೂಲವಾಗುವಂತಹ ಕಾಯ್ದೆ ರೂಪಿಸಿ ದುಡಿಯುವ ಜನರನ್ನು ವಂಚಿಸಿದೆ. ಇಂತಹ ವಿಷಯಗಳ ವಿರುದ್ಧ, ಜನರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳ ಬಗ್ಗೆ ಜೀಪ್ ಜಾಥಾವು ಸಂಚರಿಸಿ, ಜನರಲ್ಲಿ ಜಾಗೃತಿ ಮೂಡಿಸಲಿದೆ ಎಂದರು.

ರಾಜ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಜೀಪ್ ಜಾಥಾವು ಜಿಲ್ಲೆಯ ಆರು ತಾಲೂಕುಗಳಲ್ಲಿ ಸಂಚರಿಸಲಿದೆ. ಜ.20ರಂದು ಜಗಳೂರು, 21ರಂದು ಹರಪನಹಳ್ಳಿ, 22ರಂದು ಹರಿಹರ, 23ರಂದು ಚನ್ನಗಿರಿ, 24ರಂದು ದಾವಣಗೆರೆ, 25ರಂದು ಹೊನ್ನಾಳಿ ತಾಲೂಕಿನಲ್ಲಿ ಸಂಚರಿಸಲಿದೆ ಎಂದರು.

ಈ ವೇಳೆ ಮುಖಂಡ ಆನಂದರಾಜ್, ಆವರಗೆರೆ ವಾಸು, ಆವರಗೆರೆ ಚಂದ್ರು, ಬಸವರಾಜ್ ದೊಡ್ಮನಿ, ಷಣ್ಮುಖಸ್ವಾಮಿ, ಅಂಜಿನಪ್ಪ, ಟಿ.ಎಸ್.ನಾಗರಾಜ್, ವಿ.ಲಕ್ಷ್ಮಣ, ಸರೋಜ, ನಾಗಮ್ಮ, ಕೃಷ್ಣಪ್ಪ, ತಿಪ್ಪೆಸ್ವಾಮಿ, ರುದ್ರಪ್ಪ, ಐರಾಣಿ ಚಂದ್ರ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News