ಯುವಕರು ವಿವೇಕಾನಂದರ ತತ್ವಾದರ್ಶಗಳನ್ನು ಬೆಳಿಸಿಕೊಳ್ಳಬೇಕು: ವಿನಯ ಕುಲಕರ್ಣಿ

Update: 2018-01-20 13:53 GMT

ಧಾರವಾಡ, ಜ.20: ದೇಶದ ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು. ಭಾರತದ ಶಕ್ತಿ ಅಂದರೆ ಯುವ ಶಕ್ತಿ, ದುಶ್ಚಟಗಳಿಗೆ ದಾಸರಾಗುವ ಮೂಲಕ ಯೌವ್ವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಕರೆ ನೀಡಿದ್ದಾರೆ.

ನಗರದ ಕೆ.ಇ.ಬೋರ್ಡ್ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ ಧಾರವಾಡ, ಯುವ ಸಬಲೀಕರಣ ಕ್ರೀಡಾ ಇಲಾಖೆ, ಕ.ವಿ.ವಿ.ಯ ರಾಷ್ಟ್ರೀಯ ಸೇವಾ ಯೋಜನೆ ಕೋಶ ಸಹಯೋಗದಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಯುವ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಿ. ದೇಶದ ಜವಾಬ್ದಾರಿ ಇಂದಿನ ಯುವಕರ ಹೆಗಲ ಮೇಲೆ ಇದೆ. ಯುವಕರು ಸರಕಾರಿ ಕೆಲಸ ಬೇಕು ಎನ್ನುವುದನ್ನ ಬಿಟ್ಟು ಕೃಷಿ, ಹೈನುಗಾರಿಕೆ ಮಾಡಿ ಸ್ವಯಂ ಉದ್ಯೋಗ ಮಾಡಿ ಎಂದು ಅವರು ಸಲಹೆ ನೀಡಿದರು.

2016-17ನೇ ಸಾಲಿನ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಜಿಲ್ಲಾ ಯುವಕ ಸಂಘದ ಪ್ರಶಸ್ತಿಯನ್ನು ಹುಬ್ಬಳ್ಳಿಯ ಶೇರೆವಾಡ ತಾಲೂಕಿನ ಶ್ರೀ ಮಾರುತಿ ಯುವಕ ಸಂಘಕ್ಕೆ ನೀಡಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News