×
Ad

ಆಕಸ್ಮಿಕ ಬೆಂಕಿ: 5 ಕಾರುಗಳು ಸಂಪೂರ್ಣ ಭಸ್ಮ

Update: 2018-01-20 21:16 IST

ಮೈಸೂರು,ಜ.20: ಆಕಸ್ಮಿಕ ಬೆಂಕಿಯ ಕೆನ್ನಾಲಿಗೆ ಗ್ಯಾರೇಜ್‍ನಲ್ಲಿದ್ದ 5 ಕಾರುಗಳು ಹಾಗೂ ಪಕ್ಕದಲ್ಲಿದ್ದ ಮೂರು ಪೆಟ್ಟಿಗೆ ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಮೈಸೂರು-ಬೆಂಗಳೂರು ರಸ್ತೆಯ ಟಿಪ್ಪು ವೃತ್ತದ ಬಳಿಯಿರುವ ಗ್ಯಾರೇಜ್ ನಲ್ಲಿ ಮುಂಜಾನೆ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಗೆ 5  ಕಾರುಗಳು ಸುಟ್ಟು ಭಸ್ಮವಾಗಿದೆ. ಜೊತೆಗೆ ಸಮೀಪವೇ ಇದ್ದ ಪೆಟ್ಟಿಗೆ ಅಂಗಡಿಗಳು ಸಂಪೂರ್ಣ ಸುಟ್ಟುಕರಕಲಾಗಿದೆ. 

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಬೆಂಕಿಯನ್ನು ನಂದಿಸಿ ಮುಂದಾಗಬಹುದಾದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಈ ಸಂಬಂಧ ಎನ್.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News