×
Ad

ಪ್ರತಿಯೊಬ್ಬ ವಿದ್ಯಾರ್ಥಿಗೂ ಕಾನೂನು ಅರಿವು ಅತ್ಯಗತ್ಯ: ನ್ಯಾ. ಆರ್.ಪಿ.ನಂದೀಶ್

Update: 2018-01-20 23:05 IST

ಚಾಮರಾಜನಗರ, ಜ.20:- ಪ್ರತಿಯೊಬ್ಬ ವಿದ್ಯಾರ್ಥಿಗೂ ಕಾನೂನಿನ ಅರಿವು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ಆರ್.ಪಿ.ನಂದೀಶ್ ರವರು ತಿಳಿಸಿದರು. 

ನಗರದ ರಾಮಸಮುದ್ರ ರಸ್ತೆಯಲ್ಲಿರುವ ವಿದ್ಯಾವಿಕಾಸ ಸ್ವತಂತ್ರ ಪದವಿ ಪೂರ್ವ ಕಾಲೇಜು, ಸಾಧನ ಸಂಸ್ಥೆ, ಜಿಲ್ಲಾ ಪತ್ರಕರ್ತರ ಸಂಘ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಫೇಸ್‍ ಬುಕ್, ವಾಟ್ಸ್ ಆಪ್, ಮೊಬೈಲ್ ಅನ್ನು ಉಪಯೋಗಿಸದೇ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ, ಮುಂದೆ ಬರುವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಮುಖ್ಯವಾಹಿನಿಗೆ ಬರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಭಾಷಣ ಮಾಡಿದ ಹಿರಿಯ ವಕೀಲೆ ಜಿ.ನಾಗಶ್ರೀಪ್ರತಾಪ್, ಮದುವೆಯಾಗಬೇಕಾದರೆ ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ತುಂಬಿರಬೇಕು, ಬಾಲ್ಯವಿವಾಹವನ್ನು ತಡೆಯಲು ವಿದ್ಯಾರ್ಥಿಗಳ ಪಾತ್ರ ಅತ್ಯಗತ್ಯವಾಗಿದೆ ಎಂದು ಹೇಳಿದ ಅವರು, ವಯಸ್ಸಾದ ತಂದೆ-ತಾಯಿಗಳನ್ನು ಮಕ್ಕಳು ಸಾಕದೆ ವೃದ್ದಾಶ್ರಮಕ್ಕೆ ಕಳುಹಿಸಬಾರದು. ತಾವು ಸಂಪಾದಿಸಿದ ಹಣದಿಂದಲೇ ಅವರ ಪಾಲನೆ ಮಾಡಬೇಕೆಂದರು. 

ಬಾಲ ನ್ಯಾಯ ಮಂಡಲಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಕಡ್ಡಾಯವಾಗಿ ಶಿಕ್ಷಣ ಕಲಿತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಬಾಲ ಮಕ್ಕಳು ಭಿಕ್ಷೆ ಬೇಡುವುದು, ಕೂಲಿ ಕೆಲಸ ಮಾಡುವುದು ಅಪರಾಧವಾಗಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ಸಲಹೆ ನೀಡಿದರು. 

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಜಹೀರ್‍ಅಹಮದ್, ಉಪನ್ಯಾಸಕರಾದ ಮಹದೇವ್‍ಪ್ರಭು, ಜೆ.ಕುಮಾರಿ, ಕುಸುಮಾ, ವಿದ್ಯಾಶ್ರೀ, ರಮ್ಯ, ಮೌನಶ್ರಿ, ಕೋಮಲ, ಅನುರಾಜ್, ಸಿದ್ದೇಶ್ ಹಾಗೂ ಪತ್ರಿಕೆ ಛಾಯಾಗ್ರಾಹಕ ಆಲೂರು ನಾಗೇಂದ್ರಮೂರ್ತಿ, ಪುಟ್ಟು, ರೇವಣ್ಣ, ನಂಜುಂಡನಾಯಕ, ಪ್ರವೀಣ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು. ನಂತರ ಗೌರವಾನ್ವಿತ ನ್ಯಾಯಾಧೀಶರಾದ ಆರ್.ಪಿ.ನಂದೀಶ್ ರವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಲವು ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News