×
Ad

ಜ.26 ರಂದು ಬಣಕಲ್‍ನಲ್ಲಿ ಮಾನವ ಸರಪಳಿ

Update: 2018-01-20 23:13 IST

ಮೂಡಿಗೆರೆ, ಜ.20: ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್‍ನಿಂದ ಜ.26ರಂದು ಗಣರಾಜ್ಯೋತ್ಸವದ ಅಂಗವಾಗಿ ಬಣಕಲ್‍ನಲ್ಲಿ ರಾಷ್ಟ್ರ ರಕ್ಷಣೆಗೆ ಸೌಹಾರ್ಧ ಸಂಕಲ್ಪ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂದು ಮಧ್ಯಾಹ್ನ 2 ಗಂಟೆಗೆ ಬಿದರಹಳ್ಳಿಯ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಬಣಕಲ್‍ನ ಈದ್ಗಾ ಮೈದಾನದಿಂದ 3 ಗಂಟೆಗೆ ಬೃಹತ್ ಮೆರವಣಿಗೆ ನಡೆಸಲಾಗುವುದು. ನಂತರ ಪಟ್ಟಣದ ಸಮುದಾಯ ಭವನದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞಾವಿಧಿ ಬೋಧನೆ, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮಹಮ್ಮದ್, ಬೇರುಗಂಡಿ ಮಠದ ಶಿವಾಚಾರ್ಯ ರೇಣುಕ ಮಹಾಂತ ಸ್ವಾಮೀಜಿ, ಬಣಕಲ್ ಚರ್ಚ್‍ನ ಧರ್ಮಗುರು ಅಲ್ಬರ್ಟ್ ಡಿಸಿಲ್ವಾ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಪುತ್ತೂರಿನ ಮುಸ್ಲಿಂ ಧರ್ಮ ಗುರು ಅಹಮ್ಮದ್ ನಯಿಮಿ ಮುಕ್ವೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News