×
Ad

ಕೊಳ್ಳೇಗಾಲ: ಶಾಸಕರಿಂದ 40 ಲಕ್ಷ ರೂ. ಬೆಳೆ ಸಾಲ ವಿತರಣೆ

Update: 2018-01-20 23:19 IST

ಕೊಳ್ಳೇಗಾಲ,ಜ.20: ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ 52 ಹೊಸ ಸದಸ್ಯರುಗಳಿಗೆ 40 ಲಕ್ಷ ರೂಗಳನ್ನು ಕೆ.ಸಿ.ಸಿ ಬೆಳೆ ಸಾಲವನ್ನು ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರರವರು ವಿತರಿಸಿದರು.

ಇದೇ ವೇಳೆಯಲ್ಲಿ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಅವರು ಮಾತನಾಡಿ, ನಿಮ್ಮ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ 800 ಜನ ಸದಸ್ಯರುಗಳಿಗೆ 6 ಕೋಟಿಯಷ್ಟು ಬೆಲೆ ಸಾಲ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಳೆ ಸಾಲ ನೀಡಿ ಸಂಘವು ಪ್ರಗತಿಯತ್ತ ಸಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅಣಗಳ್ಳಿ ಬಸವರಾಜು, ಹಾಗೂ ನಿರ್ದೆಶಕರಗಳಾದ ಕೆ.ಎಂ.ನರಸಿಂಹನ್, ಶಿವಕುಮಾರ್, ಷಣ್ಮಖ ಸ್ವಾಮಿ, ಮಹೇಶ್, ಬಸವಣ್ಣ, ರಾಜೇಂದ್ರನ್, ಮತ್ತು ಜಿಲ್ಲಾ ಬ್ಯಾಂಕಿನ ವ್ಯವಸ್ಧಾಪಕರುಗಳಾದ ನಾಗರಾಜು, ಪ್ರವೀಣ್‍ಕುಮಾರ್, ಹಾಗೂ ವಿಚಾರಕರಾದ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ನಾಗರಾಜು, ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News