ಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಂದ 38647 ರೂ. ದಂಡ ವಸೂಲಿ
Update: 2018-01-20 23:24 IST
ಚಾಮರಾಜನಗರ, ಜ. 20 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗವು ಕಳೆದ ಡಿಸೆಂಬರ್‍ನಲ್ಲಿ ಟಿಕೇಟು ಪಡೆಯದೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 301 ಪ್ರಯಾಣಿಕರಿಂದ 38647 ರೂ. ದಂಡ ವಸೂಲಿ ಮಾಡಿದೆ.
ಕಳೆದ ತಿಂಗಳಿನಲ್ಲಿ 2026 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಲಾಗಿತ್ತು. ಈ ವೇಳೆ 212 ಪ್ರಕರಣಗಳನ್ನು ಪತ್ತೆ ಹಚ್ಚಲಾಯಿತೆಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ತಿಳಿಸಿದ್ದಾರೆ.