ಕಾಬೂಲ್ ನ ಪ್ರತಿಷ್ಠಿತ ಹೋಟೆಲ್ ಮೇಲೆ ಬಂದೂಕುಧಾರಿಗಳ ದಾಳಿ: ಐವರು ಮೃತ್ಯು

Update: 2018-01-21 06:05 GMT

ಕಾಬೂಲ್, ಜ.21: ಕಾಬೂಲ್ ನ ಪ್ರತಿಷ್ಠಿತ ಹೋಟೆಲೊಂದರ ಮೇಲೆ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಐವರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದಾಳಿಯಿಂದ ಹೆದರಿರುವ ಹೋಟೆಲ್ ನಲ್ಲಿದ್ದ ಅತಿಥಿಗಳು ಪ್ರಾಣ ಉಳಿಸಿಕೊಳ್ಳಲು ಬಾಲ್ಕನಿಗಳಿಗೆ ಹತ್ತುತ್ತಿದ್ದಾರೆ.

ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಲೇ ಇದೆ. ನಾಲ್ವರಲ್ಲಿ ಒಬ್ಬ ಬಂದೂಕುಧಾರಿಯನ್ನು ಹೊಡೆದುರುಳಿಸಲಾಗಿದೆ ಎಂದು ಭದ್ರತಾ ಮೂಲಗಳು ಮಾಹಿತಿ ನೀಡಿವೆ.

“ಐವರು ಅಫ್ಘಾನ್ ಪ್ರಜೆಗಳು ಸಾವನ್ನಪ್ಪಿದ್ದಾರೆ” ಎಂದು ಆಂತರಿಕ ಸಚಿವಾಲಯದ ವಕ್ತಾರರಾದ ನಜೀಬ್ ದಾನಿಷ್ ಹೇಳಿದ್ದಾರೆ. 16 ವಿದೇಶಿಗಳು ಸೇರಿ 100 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News