ಕೌಶಲ್ಯಾಭಿವೃದ್ಧಿ ಸಂಸ್ಥೆಗೆ ಭೂಮಿ ಒದಗಿಸಲು ಕ್ರಮ : ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2018-01-21 12:16 GMT

ಬೆಂಗಳೂರು, ಜ. 21: ಯೋಜನೆಗಳ ವೇಗ ಹೆಚ್ಚಿಸುವ ದೃಷ್ಟಿಯಿಂದ, ಅಡೆತಡೆಗಳನ್ನು ನಿವಾರಿಸಲು ಏಕಗವಾಕ್ಷಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಶ್ರಮಿಸುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಏರ್ಪಡಿಸಿದ್ದ ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ(ಬಿಎಐ) ಆಯೋಜಿಸಿರುವ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಂ ನೇತೃತ್ವದಲ್ಲಿ ಸಮಿತಿ ಫ್ರೋರ್ ಏರಿಯಾ ರೇಷಿಯೊ (ಎಫ್‌ಎಆರ್) ಮತ್ತು ಹೊಸ ನಗರಾಭಿವೃದ್ಧಿ ಯೋಜನೆಯ ದಾಖಲೆ(ಸಿಡಿಪಿ)ಯಲ್ಲಿ ರಸ್ತೆ ಅಳತೆಯ ಬಗ್ಗೆ ಪರಿಷ್ಕರಣೆಗಳನ್ನು ಮಾಡುತ್ತಿದೆ’ ಎಂದರು.

ಯೋಜನೆಗಳ ಅನುಮೋದನೆ ತಡವಾಗುವುದಕ್ಕೆ ಹಲವು ಹಂತಗಳ ಅನುಮೋದನೆಗಳು ಮತ್ತು ಸಂಬಂಧಿಸಿದ ಸಂಸ್ಥೆಗಳಿಂದ ಉತ್ತರದಾಯಿತ್ವದ ಕೊರತೆ ಕಾರಣ ಎಂದ ಅವರು, ಬಿಲ್ಡರ್‌ಗಳು ಬೆಂಗಳೂರು ನಗರದಲ್ಲಿ ಕೌಶಲ್ಯಾಭಿವೃದ್ಧಿ ಸಂಸ್ಥೆಯನ್ನು ಪ್ರಾರಂಭಿಸಲು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದರು.

ಭ್ರಷ್ಟತೆ ವಿರುದ್ಧ ಒಗ್ಗಟ್ಟು ಅಗತ್ಯ: ಭ್ರಷ್ಟಾಚಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ. ಆ ನಿಟ್ಟಿನಲ್ಲಿ ಬಿಲ್ಡರ್ಸ್‌ ಅಸೋಷಿಯೇಷನ್ ಆಫ್ ಇಂಡಿಯಾ ಭ್ರಷ್ಟಾಚಾರ ವಿರೋಧಿ ಘಟಕವನ್ನು ಆರಂಭಿಸಬೇಕು ಎಂದು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News