ಹನೂರು ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿಯ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಯಡಿಯೂರಪ್ಪ
ಹನೂರು,ಜ.21: ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಪರಿವರ್ತನಾಯಾತ್ರೆ ಕಾರ್ಯಕ್ರಮವನ್ನು ಮುಗಿಸಿದ ಬಿಜೆಪಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನಂತರ ಮಲೈಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಮುಂಜಾನೆ ಸ್ವಾಮಿ ದರ್ಶನ ಪಡೆದು ನಂತರ ಹನೂರು ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿಯ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಮುಖಂಡರಾದ ವಿಷ್ಣುಕುಮಾರ್ ನೇತೃತ್ವದಲ್ಲಿ ತಾಲ್ಲೂಕಿನ ಪ್ರಸಿದ್ದಿ ದೇವಸ್ಥಾನವಾದ ವೇಣುಗೋಪಾಲ್ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರುಗಳಾದ ರೇಣುಕಾಚಾರ್ಯ, ಬಿ.ಜೆ.ಪುಟ್ಟಸ್ವಾಮಿ, ರಾಮ್‍ದಾಸ್, ಮಾಜಿ ಸಂಸದೆ ತೇಜಸ್ವಿನಿ ರಮೇಶ್‍ಗೌಡ, ಮಾಜಿ ಶಾಸಕಿ ಪರಿಮಳನಾಗಪ್ಪ, ಮುಖಂಡರಾದ ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯಕಾರ್ಯಣಿ ಸಮಿತಿ ಸದಸ್ಯರಾದ ಆರ್.ಮಂಜುನಾಥ್, ಬಿಜಿಪಿ ಮಂಡಲ ಕಾರ್ಯದರ್ಶಿ ರಾಚಪ್ಪ , ಮುಖಂಡರಾದ ಪಿ .ಕೆ ತನ್ನಿಯಪ್ಪ , ಚಿನ್ನರಾಜು, ರಾಜುಕೌಂಡರ್, ತಂಗಮುತ್ತು, ಚಿನ್ನದೊರೈ, ವೇಲುಸ್ವಾಮಿ, ಇನ್ನಿತರರು ಹಾಜರಿದ್ದರು