ಕೇಂದ್ರ ಸರಕಾರದಿಂದ ತೊಗಾಡಿಯಾರನ್ನು ಮುಗಿಸುವ ಹುನ್ನಾರ : ಪ್ರಮೋದ್ ಮುತಾಲಿಕ್ ಆರೋಪ
Update: 2018-01-21 20:29 IST
ಗದಗ, ಜ.21: ರಾಜಸ್ಥಾನ, ಗುಜರಾತ್ ಹಾಗೂ ಕೇಂದ್ರ ಸರಕಾರಗಳು ಪ್ರವೀಣ್ ತೊಗಾಡಿಯಾ ಅವರನ್ನು ಮುಗಿಸುವ ಹುನ್ನಾರ ನಡೆಸಿವೆ ಎಂದು ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ತೊಗಾಡಿಯಾ ಅವರಿಗೆ ಏನಾದರೂ ತೊಂದರೆಯಾದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ದೇಶದ ಜನತೆ ಪಾಠ ಕಲಿಸಲಿದ್ದಾರೆ. ಶನಿವಾರ ಪ್ರವೀಣ್ ತೊಗಾಡಿಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿ ಈ ಸಂದರ್ಭ ತಿಳಿಸಿದರು.
ಕೇಂದ್ರ ಸರಕಾರಕ್ಕೆ ತಾಕತ್ತಿದ್ದರೆ ದಾವೂದ್ ಇಬ್ರಾಹೀಂ, ಸೈಯದ್ ಅವರನ್ನು ಎನ್‌ಕೌಂಟರ್ ಮಾಡಲಿ ಎಂದ ಅವರು, ದೇಶದಲ್ಲಿ ಹಿಂದೂ ಧ್ವನಿ ಹತ್ತಿಕ್ಕುವ ಕುತಂತ್ರ ನಡೆಯುತ್ತಿದೆ. ತನಗೂ ಪಾಕಿಸ್ತಾನ ಹಾಗೂ ದುಬೈ ಹೆಸರು ಹೇಳಿಕೊಂಡು ಬೆದರಿಕೆ ಕರೆ ಬಂದಿವೆ. ಇಂಥ ಬೆದರಿಕೆಗೆ ತಾನು ಹೆದರುವವನಲ್ಲ ಎಂದು ಹೇಳಿದರು.