ಸರ್ಕಾರ ಶಾಸಕರ ಅನುದಾನವನ್ನು ಹೆಚ್ಚಿಸಿದರೆ ಅಭಿವೃದ್ದಿಗೆ ಪೂರಕವಾಗುತ್ತದೆ : ಶಾಸಕ ಮಧುಬಂಗಾರಪ್ಪ

Update: 2018-01-21 15:18 GMT

ಸೊರಬ,ಜ.21 : ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಮೂಲಭೂತ ಕೊರತೆಗಳ ಬೇಡಿಕೆಗಳೆ ಹೆಚ್ಚು ಕೇಳಿಬರುತ್ತಿದ್ದು, ಸರ್ಕಾರ ನೀಡುವ ಶಾಸಕರ ಅನುದಾನದಲ್ಲಿ ಬೇಡಿಕೆಗಳನ್ನು ಈಡೇರಿಸಲು ಕಷ್ಟ ಸಾದ್ಯವಾಗಿದೆ. ಸರ್ಕಾರ ಶಾಸಕರ ಅನುದಾನವನ್ನು ಹೆಚ್ಚಿಸಿದರೆ ಅಭಿವೃದ್ದಿಗೆ ಪೂರಕವಾಗುತ್ತದೆ ಎಂದು ಶಾಸಕ ಮಧುಬಂಗಾರಪ್ಪ ತಿಳಿಸಿದರು.

ಶನಿವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2017-18ನೇ ಸಾಲಿನ ಪ್ರತಿಭಾ ಪುರಸ್ಕಾರ, ರೋವರ್ಸ್ ಮತ್ತು ರೇಂಜರ್ಸ್, ಕ್ರೇಡಾ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿಯೇ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದೆ. ಇದು ಕೇವಲ ಪಟ್ಟಣದ ಕಾಲೇಜೊಂದರ ಸಮಸ್ಯೆಯಲ್ಲ. ಕಾಲೇಜು ಉಪನ್ಯಾಸಕರ ಕೊರತೆಯ ನಡುವೆಯೂ ವಿದ್ಯಾರ್ಥಿಗಳಿಗೆ ಇರುವ ವ್ಯವಸ್ಥೆಯಲ್ಲಿಯೇ ಉತ್ತಮ ಶಿಕ್ಷಣ ನೀಡಿದ ಫಲವಾಗಿ ರಾಜ್ಯಮಟ್ಟದಲ್ಲಿಯೇ ಗುರುತಿಸಿಕೊಳ್ಳುವಂತಾಗಿದೆ. 

ಕಾಲೇಜಿಗೆ ಕಾಂಪೌಂಡ್ ವ್ಯವಸ್ಥೆ  ಬೇಕಾಗಿದ್ದು, ಕಾನೂನಾತ್ಮಕ ತೊಡಕಿರುವುದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಕೂಡಲೆ ಪರಿಹರಿಸುವಲ್ಲಿ ಪ್ರಯತ್ನಿಸುತ್ತೇನೆ. ವಿಧ್ಯಾರ್ಥಿಗಳಿಗೆ ಕಾಲೇಜಿಗೆಬರಲು ಸಮರ್ಪಕ ಸಾರಿಗೆ ಸೌಲಭ್ಯದ ಕೊರತೆಯಿದೆ. ಬಸ್‍ಗಳ ಸೌಲಬ್ಯವೇ ಇಲ್ಲದಿರುವಾಗ ಬಸ್‍ನಿಲ್ದಾಣ ಉದ್ಘಾಟಿಸಿದರೆ ಏನು ಪ್ರಯೋಜನವಾಗುವುದಿಲ್ಲ. ಬಸ್‍ಗಳ ಸೌಲಭ್ಯವನ್ನು ಕಲ್ಪಿಸುವವರೆಗೂ ಕೆಸ್‍ಆರ್‍ಟಿಸಿ ಬಸ್‍ನಿಲ್ದಾಣವನ್ನು ಉದ್ಘಾಟಿಸದಿರಲು ನಿರ್ಧರಿಸಿದ್ದೇನೆ. ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಸದ್ಯದಲ್ಲಿಯೇ ಸಾರಿಗೆ ಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ. ಕಾಲೇಜಿಗೆ ಬೇಕಾಗಿರುವ ಹೆಚ್ಚುವರಿ ಕೊಠಡಿಗಳು ಹಾಗು ಉಪನ್ಯಾಸಕರ ಕೊರತೆಯನ್ನು ನೀಗಿಸುವಲ್ಲಿ ಪ್ರಯತ್ನಿಸುತ್ತೆನೆ ಎಂದರು.

ಸಭೆಯ ಅಧ್ಯಕ್ಶತೆಯನ್ನು ಪ್ರಾಂಶುಪಾಲ ಕೆ.ಆರ್.ಶಿವಾನಂದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಸದಸ್ಯೆ ತಾರಾಶಿವಾನಂದ್, ಕೊಡಕಣಿ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಸದಸ್ಯ ಚಿನ್ನಪ್ಪ, ಪಪಂ ಉಪಾಧ್ಯಕ್ಷೆ ರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಚಿ ಹನುಮಂತಪ್ಪ, ಸದಸ್ಯ ಪ್ರಶಾಂತ್ ಮೇಸ್ತ್ರಿ, ಎಸ್‍ಡಿಎಂಸಿ ಕಾರ್ಯಾಧ್ಯಕ್ಷ ಎಸ್.ಆರ್.ಕುಮಾರಸ್ವಾಮಿ, ಸಯದ್ ಅತೀಕ್, ಯು.ಫಯಾಜ್ ಅಹಮದ್, ಕಸಾಪ ಅಧ್ಯಕ್ಷ ಹಾಲೇಶ್ ನವಲೆ, ಕರವೇ ಅಧ್ಯಕ್ಷ ಬಲೀಂದ್ರಪ್ಪ, ಜೆಸಿಐ ಅಧ್ಯಕ್ಷ ಪ್ರಶಾಂತ್ ದೊಡ್ಮನೆ, ವಾಸುದೇವರಾವ್ ಬೆನ್ನೂರು, ನೆಮ್ಮದಿ ಶ್ರೀಧರ್, ಉಪನ್ಯಾಸಕರಾದ ಕೆ.ವಿಶ್ವನಾಥ, ವಿಜಯ ದಟ್ಟೇರ್, ಆರೀಫಾ ಬೇಗಮ್, ಪ್ರಿಯಕುಮಾರ್, ಬಿ.ಎಸ್.ಕವಿತಾ ಡಿ.ವಿ.ಚಿದಾನಂದ, ಎಚ್.ಕೆ.ಚಂದ್ರಶೇಖರ್, ಆರ್.ಪ್ರವೀಣಾ, ಎಂ.ಬಂಗಾರಪ್ಪ, ಜಿ.ಬಂಗಾರಪ್ಪ, ಜೆ.ಎಸ್.ರೇಣುಕಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News