ರಾಜ್ಯದಲ್ಲಿ ಅನಿಮೇಶನ್ ಪರಿಣತಿ ಕೇಂದ್ರ

Update: 2018-01-21 16:58 GMT

ಬೆಂಗಳೂರು, ಜ.21: ಅನಿಮೇಶನ್, ವಿಶುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಉದ್ಯಮಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ವಿಶೇಷ ಪರಿಣತಿ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಭಾರತದಲ್ಲಿ ಅನಿಮೇಶನ್ ಕ್ಷೇತ್ರವು ತ್ವರಿತವಾಗಿ ಬೆಳೆಯುತ್ತಿರುವ ವಲಯವಾಗಿದ್ದು, ಹಲವು ಹೊಸ ಗೇಮ್‌ಗಳು, ಅನಿಮೇಶನ್ ಮತ್ತು ಕಾರ್ಟೂನ್‌ಗಳು, ಕಾಮಿಕ್‌ಗಳನ್ನು ಭಾರತದಲ್ಲೇ ಅಭಿವೃದ್ಧಿಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ವಿಶೇಷ ಪರಿಣತಿ ಕೇಂದ್ರ ಸ್ಥಾಪಿಸಿ, ಯುವಜನತೆಗೆ ಸೃಜನಾತ್ಮಕವಾದ ಉದ್ಯೋಗವನ್ನು ಕಲ್ಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ದೇಶದಲ್ಲಿ ಅನಿಮೇಶನ್ ಉದ್ಯಮವು 2016-20ರ ಅವಧಿಯಲ್ಲಿ ಶೇ.8.5ರ ಅನುಪಾತದ ವೇಗದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ನಿರೀಕ್ಷಿಸಲಾಗಿದ್ದು, ಸುಮಾರು 20.9ಬಿಲಿಯನ್ ವಹಿವಾಟು ಹೊಂದಲಿದೆ. ಪ್ರಸ್ತುತ ದಿನಗಳಲ್ಲಿ ಅನಿಮೇಟೆಡ್ ಸಿನಿಮಾಗಳು, ವೀಡಿಯೋಗೇಮ್‌ಗಳು ಭಾರತದಲ್ಲಿ ತಯಾರಾಗುತ್ತಿವೆ. ಈ ನಿಟ್ಟಿನಲ್ಲಿ ಅನಿಮೇಶನ್ ವಿಶೇಷ ಪರಿಣತಿ ಕೇಂದ್ರ ಸ್ಥಾಪನೆಯಿಂದ ಯುವ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕೌಶಲ್ಯ ಅಭಿವೃದ್ಧಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News