ಕವಿಗಳ ಒಪ್ಪಿಗೆ ಪಡೆಯುವುದು ಸೂಕ್ತ: ನಾಗತಿಹಳ್ಳಿ ಚಂದ್ರಶೇಖರ

Update: 2018-01-21 17:06 GMT

ಧಾರವಾಡ, ಜ.21: ಸಿನೆಮಾ ನಿರ್ದೇಶಕರು ಕವಿತೆಗಳನ್ನು ತಮ್ಮ ಸಿನೆಮಾದಲ್ಲಿ ಅಳವಡಿಸಿಕೊಳ್ಳುವ ಮುನ್ನ ಕವಿಗಳ ಒಪ್ಪಿಗೆ ಪಡಿಯವುದು ಅಗತ್ಯವೆಂದು ಹಿರಿಯ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ತಿಳಿಸಿದರು.

ವಿವಾರ ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯ ಮತ್ತು ಸಂಗೀತ ಗೋಷ್ಟಿಯಲ್ಲಿ ಮಾತನಾಡಿದ ಅವರು, ಕವಿಗಳ ಹಾಡುಗಳನ್ನು ಸಿನೆಮಾಗಳಲ್ಲಿ ಅಳವಡಿಸುವಾಗ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂಗೀತ ನಿರ್ದೇಶಕರು ಕವಿಗಳ ಒಪ್ಪಿಗೆ ಪಡೆಯುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಸಿನೆಮಾದಲ್ಲಿ ವಚನಗಳು, ತ್ರಿಪದಿಗಳು ಹಾಗೂ ಕೀರ್ತನೆಗಳನ್ನು ಬಳಸುವಾಗ ಅದರ ರಚನೆಕಾರರು ಈಗಿಲ್ಲ. ಅಂತಹ ಸಂದರ್ಭದಲ್ಲಿ ಹಿರಿಯ ಕವಿಗಳ, ವಿದ್ವಾಂಸರ ಜೊತೆಗೆ ಚರ್ಚಿಸಿ ಮೂಲ ಆಶಯಗಳಿಗೆ ಧಕ್ಕೆ ಬರದಂತೆ ತಮ್ಮ ಸಿನೆಮಾಗಳಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News