ಓ ಮೆಣಸೇ..

Update: 2018-01-22 06:43 GMT

ತಪ್ಪು ಮಾಡುವುದು ಸಹಜ, ಅದನ್ನು ತಿದ್ದಿಕೊಳ್ಳುವುದು ಬುದ್ಧಿವಂತರ ಲಕ್ಷಣ - ಕೆ.ಎಸ್. ಈಶ್ವರಪ್ಪ, ಬಿಜೆಪಿ ಮುಖಂಡ

ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಮತದಾರರು ತಪ್ಪು ತಿದ್ದಿಕೊಂಡು ಬುದ್ಧಿವಂತರಾದರು.

---------------------

ಗಡಿರಕ್ಷಣಾ ಯೋಧರ ತ್ಯಾಗದಿಂದಾಗಿ ನಾಗರಿಕರು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ - ರಾಮನಾಥ್ ಕೋವಿಂದ್, ರಾಷ್ಟ್ರಪತಿ

ಆದರೆ ಯೋಧರ ಕುಟುಂಬಸ್ಥರು ನಿದ್ದೆಯನ್ನು ಕಳೆದುಕೊಂಡಿದ್ದಾರೆ ಎನ್ನುವುದನ್ನೂ ನೆನಪಿಟ್ಟುಕೊಳ್ಳಬೇಕು.

---------------------

ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಎಂಬ ದೊಡ್ಡ ನಾಟಕ ಕಂಪೆನಿಯ ಮಾಲಕ - ರಾಮಲಿಂಗಾರೆಡ್ಡಿ, ಸಚಿವ

ಅವರು ವೃತ್ತಿಪರ ನಾಟಕ ಕಂಪೆನಿಯ ಮಾಲಕ ಎನ್ನುವುದು ದೇಶಕ್ಕೆ ಮನವರಿಕೆಯಾಗಿದೆ.

---------------------

ಧರ್ಮಕ್ಕೆ ಮನುಷ್ಯನ ಆವಶ್ಯಕತೆಯಿಲ್ಲ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಆದರೆ ರಾಜಕಾರಣಿಗಳಿಗೆ ಧರ್ಮದ ಆವಶ್ಯಕತೆ ಇದೆ.

---------------------

ನಮ್ಮಲ್ಲಿರುವ ಕೆಲವೇ ಕೆಲವು ಮುಸ್ಲಿಮರು ಮಾತ್ರ ದೇಶಭಕ್ತರು - ಸುರೇಂದ್ರ ಸಿಂಗ್, ಉ.ಪ್ರ. ಶಾಸಕ

ಆರೆಸ್ಸೆಸ್‌ನ ಕೆಲವು ಮಂದಿಯ ಹೆಸರು ಕೂಡ ಸ್ವಾತಂತ್ರ ಹೋರಾಟಗಾರರ ಪಟ್ಟಿಯಲ್ಲಿಲ್ಲವಲ್ಲ, ಯಾಕೆ?

---------------------

ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡಲ್ಲಿ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ - ಯು.ಟಿ ಖಾದರ್, ಸಚಿವ

ಉತ್ತಮ ಆಹಾರ ಕಡಿಮೆ ಬೆಲೆಗೆ ದೊರಕುವ ಹಾಗೆ ಮೊದಲು ಮಾಡಿ.

---------------------

ನರೇಂದ್ರ ಮೋದಿ ನನ್ನ ಒಳ್ಳೆಯ ಸ್ನೇಹಿತ - ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ
ನರೇಂದ್ರ ಮೋದಿಯ ಒಳಕೋಣೆಯ ದೇವರ ಮನೆಯಲ್ಲಿ ಹಿಟ್ಲರ್ ಫೋಟೊ ಇದೆ, ಎಚ್ಚರಿಕೆ.

---------------------

ಪ್ರಧಾನಿ ನರೇಂದ್ರ ಮೋದಿ ನೀಡಿದ ದುಡ್ಡಿನಲ್ಲಿ ಸಿಎಂ ಸಿದ್ದರಾಮಯ್ಯ ಜಾತ್ರೆ ಮಾಡುತ್ತಿದ್ದಾರೆ - ಪ್ರತಾಪ್ ಸಿಂಹ, ಸಂಸದ

ಅದಾನಿ, ಅಂಬಾನಿ ಮಾಡಿದರೆ ಓಕೆನಾ?

---------------------

ಕರ್ನಾಟಕದ ಜನರು ಹರಾಮಿಗಳು - ವಿನೋದ್ ಪಾಳೇಕರ್, ಗೋವಾ ಸಚಿವ

ರಮ್ ಕುಡಿದು ರಾಮ್ ಎಂದು ಹೇಳಲು ಹೋಗಿ ಹರಾಮ್ ಎಂದಾಗಿರಬೇಕು.

---------------------

ಇನ್ನು ನಾನು ಜೀವನ ಪರ್ಯಂತ ಬಿಳಿ ಪಂಚೆ ಉಡುವೆ - ಜನಾದರ್ನರೆಡ್ಡಿ, ಮಾಜಿ ಸಚಿವ
 ಬಿಳಿ ಪಂಚೆಯಿಂದ ಕಪ್ಪು ವ್ಯಕ್ತಿತ್ವವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ.

---------------------

ಕಿಂಗ್ ಮೇಕರ್ ಕನಸು ಕಾಣುತ್ತಿರುವ ಜೆಡಿಎಸ್ ಎರಡಂಕಿ ದಾಟುವುದು ಅನುಮಾನ -  ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಒಟ್ಟಿನಲ್ಲಿ ಮುಂದಿನ ಬಾರಿಯ ಚುನಾವಣೆ ಬಿಜೆಪಿಯ ಪಾಲಿಗೆ ಎರಡಂಕಿ ಲಾಟರಿಯಂತಾಗಿದೆ. 

---------------------

ಸರ್ವ ಧರ್ಮಗಳನ್ನು ಸಮಾಧಾನದಿಂದ ಕಾಣುವುದೇ ಜಾತ್ಯತೀತತೆ - ವಜೂಭಾಯಿ ವಾಲಾ, ರಾಜ್ಯಪಾಲ

ಸಚಿವ ಅನಂತ ಕುಮಾರ್ ಹೆಗಡೆ ಅವರು ಈಗಾಗಲೇ ಜಾತ್ಯತೀತತೆ ಎಂದರೆ ‘ಅಪ್ಪ ಅಮ್ಮ’ ಇಲ್ಲದವರು ಎಂದಿದ್ದಾರಲ್ಲ?

---------------------

ಹಿಂದೂ ಧರ್ಮ ಎನ್ನುವುದು ಇಲ್ಲ, ನಾವೆಲ್ಲ ದ್ರಾವಿಡರು - ಕುಂ.ವೀರಭದ್ರಪ್ಪ, ಹಿರಿಯ ಸಾಹಿತಿ

ವೈದಿಕ ಧರ್ಮವನ್ನು ಪ್ರತ್ಯೇಕ ಧರ್ಮವಾಗಿ ಘೋಷಿಸಿದರೆ ದ್ರಾವಿಡರ ಗುರುತು ಹಚ್ಚುವುದು ಸುಲಭವಾಗುತ್ತದೆ.

---------------------

ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದು ಶತ್ರು ನಾಶಕ್ಕಲ್ಲ - ದೇವೇಗೌಡ, ಮಾಜಿ ಪ್ರಧಾನಿ

ಹೋಮ ಯಾಗಗಳಿಗೆ ಭಯಪಡುವುದಿಲ್ಲ ಎಂದು ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ.

---------------------

ಅರಣ್ಯ ಮಂತ್ರಿಯನ್ನು ಕಾಡಿಗೆ ಕಳುಹಿಸಿ - ನಳಿನ್‌ಕುಮಾರ್ ಕಟೀಲು, ಸಂಸದ

ನೀವೆಲ್ಲ ಸೇರಿ ನಾಡನ್ನೇ ಕಾಡು ಮಾಡಿ ಬಿಟ್ಟಿದ್ದೀರಲ್ಲ?

---------------------

ಅವರವರ ಮೂಗಿನ ನೇರಕ್ಕೆ ಬರೆದ ಇತಿಹಾಸ ನಮಗೆ ಬೇಡ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ಬರೇ ನಿಮ್ಮ ಮೂಗಿನ ನೇರಕ್ಕೆ ಬರೆದ ಇತಿಹಾಸ ಮಾತ್ರ ಬೇಕೇ?
---------------------

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಿಗೆ ಈಗ ಹಿಂದೂ ನಾಯಕರು ಬೇಡವಾಗಿದ್ದಾರೆ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ರಾಷ್ಟ್ರೀಯ ಮುಖ್ಯಸ್ಥ
ನೀವು ಬೇಡವಾಗಿದ್ದಿದ್ದರೆ ಎಂದೋ ಜೈಲು ಪಾಲಾಗುತ್ತಿದ್ದಿರಿ.

---------------------

ನನ್ನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲು ಪ್ರಯತ್ನಿಸಲಾಗುತ್ತಿದೆ - ಪ್ರವೀಣ್ ತೊಗಾಡಿಯಾ, ವಿಎಚ್‌ಪಿ ನಾಯಕ
ತಾವು ಮಾನವಹಕ್ಕು ಆಯೋಗಕ್ಕೆ ಯಾಕೆ ದೂರು ಕೊಡಬಾರದು?

---------------------

ಕಾಂಗ್ರೆಸ್ ಹೋದಲ್ಲೆಲ್ಲ ಬರ  - ನರೇಂದ್ರ ಮೋದಿ, ಪ್ರಧಾನಿ

ನೀವು ಹೋದಲ್ಲೆಲ್ಲ ತೆರಿಗೆ.

---------------------

ಸಿಎಂ ಸಿದ್ದರಾಮಯ್ಯರಿಗೆ ಸ್ವತಂತ್ರ ಅಸ್ತಿತ್ವ ಇಲ್ಲ - ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
ತಮ್ಮ ಪಕ್ಷದಲ್ಲಿರುವಾಗ ಅವರಿಗೆ ಅಸ್ತಿತ್ವವೇ ಇರಲಿಲ್ಲವಲ್ಲ?

---------------------

ಬಿಜೆಪಿಯವರೆಲ್ಲ ಕೌರವರಂತೆ, ಕಾಂಗ್ರೆಸ್‌ನವರು ಪಾಂಡವರಂತೆ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಒಟ್ಟಿನಲ್ಲಿ ದ್ರೌಪದಿ ವಸ್ತ್ರಾಪಹರಣಕ್ಕೆ ಸಿದ್ಧಳಾಗಬೇಕಾಗಿದೆ.

---------------------

ಡಿ.ವಿ ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಿದ್ದೇ ನಾನು - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಯಾರು ಎಂದು ಕೇಳಿದರಂತೆ ಯಡಿಯೂರಪ್ಪ?

---------------------

ನಾನು ಕರೆದರೆ ಗಾಲಿ ಜನಾದರ್ನ ರೆಡ್ಡಿ ಮತ್ತೆ ರಾಜಕಾರಣಕ್ಕೆ ಬರ್ತಾರೆ - ಶ್ರೀರಾಮುಲು, ಸಂಸದ
ಯಾರು ಕರೆದರೂ ಬರಲು ತುದಿಗಾಲಲ್ಲಿ ನಿಂತಿದ್ದಾರೆ.

---------------------

ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್, ವಲಸೆ ಕಾಂಗ್ರೆಸ್ ಎಂಬ ಗೊಂದಲವಿಲ್ಲ - ಡಿ.ಕೆ. ಶಿವಕುಮಾರ್, ಸಚಿವ

ತಮ್ಮನ್ನು ತಾವು ಮೂಲ ಎಂದು ಕರೆದು ಸಿದ್ದರಾಮಯ್ಯರನ್ನು ವಲಸೆ ಎಂದು ವ್ಯಂಗ್ಯವಾಡುತ್ತಿದ್ದೀರಾ?
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...