ಸ್ವಾಮಿ ವಿವೇಕಾನಂದರ ಬದುಕು ಯುವಕರನ್ನು ಸದೃಢರನ್ನಾಗಿಸುತ್ತದೆ: ರಾಮಕೃಷ್ಣ ಕಾರಂತ

Update: 2018-01-22 17:06 GMT

ಬಣಕಲ್, ಜ.22: ವಿವೇಕಾನಂದರವರು ಭಾರತ ದೇಶದ ಪರಂಪರೆಯನ್ನು ಜಗತ್ತಿಗೆ ಸಾರಿದ ಮಹಾತ್ಮರಾಗಿದ್ದಾರೆ. ದೇಶದ ಯುವಪೀಳಿಗೆಗೆ ಮಾರ್ಗದರ್ಶನ ನೀಡಿ ದೇಶ ಕಟ್ಟುವ ನಿಟ್ಟಿನಲ್ಲಿ ಯುವಕರು ಮುಂದೆ ಬರಬೇಕು. ಅನೀತಿ, ಅಧರ್ಮ, ಅಸತ್ಯವನ್ನು ದೂರವಿರಿಸಿ ಸರ್ವರ ಒಳಿತಿಗೆ ಶ್ರಮಿಸಿದ ಮಹಾಚೇತನ ಸ್ವಾಮಿ ವಿವೇಕಾನಂದರಾಗಿದ್ದಾರೆ ಎಂದು ಬಣಕಲ್‍ನ ಹಿರಿಯ ಕಾರ್ಯಕರ್ತ ರಾಮಕೃಷ್ಣ ಕಾರಂತ ಹೇಳಿದರು.

ಅವರು ಬಣಕಲ್‍ನಲ್ಲಿ ಎಬಿವಿಪಿ ಹಮ್ಮಿಕೊಂಡಿದ್ದ ‘ಯುವ ಜಾಗೃತ ಸಮಾವೇಶ’ದಲ್ಲಿ ಮಾತನಾಡಿದರು. ವಿವೇಕಾನಂದರು ವಿದೇಶದಲ್ಲಿ ಹಿಂದುಸ್ಥಾನದಿಂದ ಬಂದಿದ್ದೇನೆ ಎಂಬ ದೇಶದ ಹೆಮ್ಮೆಯನ್ನು ಎತ್ತಿ ಹಿಡಿದವರು.ಹಿಂದೂಸ್ಥಾನ ಎಂದರೆ ಜಾತಿ ಧರ್ಮದ ಬಗ್ಗೆ ಅವರು ಉಲ್ಲೇಖವಾಗಿರಲಿಲ್ಲ. ಅವರು ಸರ್ವ ಧರ್ಮವರನ್ನು ಪ್ರೀತಿಸಿದವರು. ಎಲ್ಲಿ ಅನೀತಿ, ಅಧರ್ಮ, ಅಸತ್ಯ ನೆಲೆಸುತ್ತೋ ಅಲ್ಲಿ ನಾನು ಮತ್ತೆ ಜನ್ಮ ತಾಳುತ್ತೇನೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ರಾಮಕೃಷ್ಣ ಪರಮಹಂಸರ ಹಸ್ತ ಸ್ಪರ್ಶದಿಂದ ಪ್ರಭಾವಿತರಾದವರು ಸ್ವಾಮಿ ವಿವೇಕಾನಂದರವರು. ವಿದ್ಯಾರ್ಥಿಗಳು ಅವರ ಪುಸ್ತಕಗಳನ್ನು ಓದಿದರೆ ಅವರ ಉತ್ತಮ ನಿಲುವು ಏನಾಗಿತ್ತು ಎಂಬುದು ಅರ್ಥವಾಗುತ್ತದೆ. ಅವರ ಮಾರ್ಗದರ್ಶನದಿಂದ ಯುವ ಪೀಳಿಗೆಯು ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ನುಡಿದರು.

ಉಪನ್ಯಾಸಕ ರಾಜೇಶ್ ಮಾತನಾಡಿದರು. ಕಸಾಪದ ಹೋಬಳಿ ಅಧ್ಯಕ್ಷ ಮೋಹನ್‍ಕುಮಾರ್‍ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಣಕಲ್‍ನ ವಿದ್ಯಾಭಾರತಿ ಶಾಲೆ, ಬಣಕಲ್ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಬಣಕಲ್ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ವಿವೇಕಾನಂದರ ಪರ ಘೋಷಣೆಗಳನ್ನು ಕೂಗಿದರು.

ಕಾರ್ಯಕ್ರಮದಲ್ಲಿ ಎಬಿವಿಪಿಯ ಬಣಕಲ್ ಹೋಬಳಿ ಸಂಚಾಲಕ ಪವನ್‍ ಬಿನ್ನಡಿ, ವಿನಯ್‍ಕುಮಾರ್‍ಶೆಟ್ಟಿ, ಶಶಿಧರ್, ಅಭಿಷೇಕ್, ಅಭಿಬಣಕಲ್, ಸೀಜಿತ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News