ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಜೋವಿನ್ ಜೋಸೆಫ್
Update: 2018-01-22 22:54 IST
ಮಡಿಕೇರಿ, ಜ.22 :ಮಡಿಕೇರಿಯ 19 ಕೆಎಆರ್ ಬಿಎನ್ ಎನ್‍ಸಿಸಿ ಕೆಡೆಟ್‍ನ ಹಿರಿಯ ವಿಭಾಗದ ಜೂನಿಯರ್ ಆಫೀಸರ್ ಜೋವಿನ್ ಅವರು ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆಯ ಮುಖ್ಯಭಾಗವಾದ ರಾಜಪಥದ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.
ಜೋವಿನ್ ಜೋಸೆಫ್ ಅವರು ಸಂತ ಜೋಸೆಫ್ ಸಂಯುಕ್ತ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜೋಸೆಫ್ ಶಾಂತರಾಜ್ ಹಾಗೂ ನ್ಯಾನ್ಸಿ ಶೀಲಾ ಜೋಸೆಫ್ ದಂಪತಿಗಳ ಪುತ್ರ. ಸಂಯುಕ್ತ ಪ್ರೌಢಶಾಲೆ ಮತ್ತು ಸಂತ ಮೈಕಲರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಪುತ್ತೂರಿನ ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.