×
Ad

ಎಲ್ಲೆಡೆ ಆರೋಗ್ಯ- ಎಲ್ಲರಿಗೂ ಆರೋಗ್ಯಕ್ಕೆ ಪೂರಕವಾಗಿ ಕಾರ್ಯಗಾರ ನಡೆಸಲಾಗುತ್ತಿದೆ: ಡಾ.ಲಕ್ಷೀನಾರಣ ಶಣೈ

Update: 2018-01-22 23:30 IST

ಮೈಸೂರು,ಜ.22: ಆಯುರ್ವೇದ ಸಂಶೋಧನೆಯಿಂದ ಯಾವ ರೀತಿಯ ಅನುಕೂಲ ಆಗಲಿದೆ. ಆಯುರ್ವೇದಲ್ಲಿ ಹೊಸ ಹೊಸ ಮಾದರಿಯ ಔಷಧಗಳನ್ನು ಕಂಡು ಹಿಡಿಯುವವರು ಅದನ್ನು ಎಲ್ಲರಿಗೂ ತಿಳಿಸಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಮೈಸೂರು ಆಯುರ್ವೇದ ಸಂಶೋಧನಾ ಸಂಸ್ಥೆ ಸಹಾಯಕ ನಿರ್ದೇಶಕ ಡಾ.ಲಕ್ಷೀನಾರಾಯಣ ಶಣೈ ತಿಳಿಸಿದರು.

ಈ ಕಾರ್ಯಗಾರದಲ್ಲಿ ಆಯುರ್ವೇದ ಸಂಶೋಧಕರುಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಫಾರ್ಮಸಿಸ್ಟ್ ಗಳು, ಎಂಬಿಎ ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದವರು, ಐಎಎಸ್, ಐಎಫ್‍ಎಸ್ ಅಧಿಕಾರಿಗಳು ಭಾಗವಹಿಸಿದ್ದಾರೆ. ಆಯುರ್ವೇದ ಪದ್ಧತಿಯನ್ನು ಯಾವ ರೀತಿ ಬೆಳೆಸಬೇಕು ಮತ್ತು ಅದರ ಉಪಯೋಗವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತವೆ ಎಂದರು.

ರಾಜ್ಯ ಸರ್ಕಾರ 2025 ರ ವೇಳೆಗೆ ಎಲ್ಲೆಡೆ ಆರೋಗ್ಯ, ಎಲ್ಲರಿಗೂ ಆರೋಗ್ಯ ಎಂಬ ದೂರ ದೃಷ್ಟಿಯನ್ನು ಇಟ್ಟುಕೊಂಡು ಆರೋಗ್ಯದ ಬಗ್ಗೆ  ಹೆಚ್ಚು ಒತ್ತು ನೀಡುತ್ತಿದೆ. ಅದಕ್ಕೆ ಪೂರಕವಾಗಿ ಇಂತಹ ಕಾರ್ಯಗಾರವನ್ನು ಹೆಚ್ಚು ನಡೆಸಲಾಗುತ್ತಿದೆ. ಇಲ್ಲಿ ತೀರ್ಮಾನ ಕೈಗೊಳ್ಳುವ ಅಂಶಗಳನ್ನು ಸರ್ಕಾರದ ಮಟ್ಟಕ್ಕೆ ತಂದು ಅದು ಜಾರಿಯಾಗಲು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.


ಹೊಸ ಹೊಸ ಸಂಶೋಧನೆಗಳ ಮೂಲಕ ಆಯುರ್ವೇದ ಪದ್ಧತಿ ಬೆಳೆಯುತ್ತಿದೆ. ಆದರೆ ಅದರ ಮೂಲ ಏನು ಎಂಬ ಗುಟ್ಟನ್ನು ಸಂಶೋಧಕರು ಬಿಟ್ಟುಕೊಡುತ್ತಿಲ್ಲ. ಹಾಗಾಗಿ ಆಯುವೇರ್ದ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ. ಸಂಶೋಧಕರು ಹೊಸ ಬಗೆಯ ಔಷಧವನ್ನು ಕಂಡು ಹಿಡಿದರೆ ಅದನ್ನು ತಿಳಿಸಬೇಕು. ಅವರ ಹೆಸರಿನ ಮೂಲಕವೇ ಎಲ್ಲಾ ಕಡೆ ತಲುಪುವಂತೆ ಮಾಡಲಾಗುತ್ತದೆ.
 -ಡಾ.ಲಕ್ಷೀನಾರಾಯಣ ಶಣೈ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News