“2014ರಲ್ಲಿ 600 ಕೋಟಿ ಮತದಾರರು ಬಿಜೆಪಿಗೆ ಮತ ನೀಡಿದ್ದರು”…!

Update: 2018-01-23 13:42 GMT

ಡಾವೋಸ್, ಜ.23: ಡಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿಯವರು ಮಾತನಾಡುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಮ್ಮೇಳನದಲ್ಲಿ ಭಯೋತ್ಪಾದನೆ, ಆರ್ಥಿಕತೆ ಹಾಗು ಅಂತಾರಾಷ್ಟ್ರೀಯ ಸಹಕಾರದ ಬಗ್ಗೆ ಮಾತನಾಡಿದ ಪ್ರಧಾನಿ “ಸಂಪತ್ತು ಹಾಗು ಆರೋಗ್ಯ ಬೇಕಿದ್ದರೆ ಭಾರತಕ್ಕೆ ಬನ್ನಿ” ಎಂದು ವಿಶ್ವ ನಾಯಕರನ್ನು ಭಾರತದಲ್ಲಿ ಹೂಡಿಕೆಗೆ ಆಹ್ವಾನಿಸಿದರು.

ಇದೇ ಸಂದರ್ಭ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಗಳಿಸಿದ ಬಗ್ಗೆ ಮಾತನಾಡಿದ ಪ್ರಧಾನಿ ಬಾಯ್ತಪ್ಪಿನಿಂದ, “2014ರಲ್ಲಿ ಭಾರತದ 600 ಕೋಟಿ ಮತದಾರರು 30 ವರ್ಷಗಳ ನಂತರ, ಪ್ರಥಮ ಬಾರಿಗೆ ಮತ್ತೊಂದು ರಾಷ್ಟ್ರೀಯ ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಬೆಂಬಲಿಸಿ ಅಧಿಕಾರಕ್ಕೆ ತಂದರು” ಎಂದಿದ್ದಾರೆ ಎನ್ನಲಾಗಿದೆ. ಪ್ರಧಾನಿಯವರು ಬಾಯ್ತಪ್ಪಿನಿಂದಾಗಿ 600 ಕೋಟಿ ಮತದಾರರು ಎಂದು ಹೇಳಿದ್ದಾರೆ ಎನ್ನಲಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  

 “ವಿದೇಶದಲ್ಲಿ ಮತ್ತೊಮ್ಮೆ ಸುಳ್ಳು ಹೇಳಿದ ಪ್ರಧಾನಿ” ಎಂದು ಹಲವರು ಟೀಕಿಸಿದ್ದರೆ, ಇನ್ನೂ ಕೆಲವರು, “ಅಂದರೆ ವಿಶ್ವದ 80 ಶೇ.ಜನರು ಬಿಜೆಪಿಗೆ ಮತ ನೀಡಿದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News