ಕೋಲಾರ: ಎಬಿವಿಪಿ ವತಿಯಿಂದ ಸುಭಾಷ್‍ ಚಂದ್ರಬೋಸ್ 121ನೇ ಜಯಂತಿ ಆಚರಣೆ

Update: 2018-01-23 17:11 GMT

ಕೋಲಾರ,ಜ.23: ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಕೋಲಾರ ಶಾಖೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಸಹ ನೇತಾಜಿ ಸುಭಾಷ್‍ ಚಂದ್ರಬೋಸ್ ರವರ 121ನೇ ಜಯಂತಿಯನ್ನು ನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಪುಷ್ಪಾಚರಣೆ ಮಾಡುವುದರ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಯೂ ಕನ್ನಡ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸುಭಾಷ್‍ಚಂದ್ರ ಬೋಸ್ ರವರು ಜನಿಸಿದ್ದು 1897ರ ಜನವರಿ 23 ರಂದು. ಈಗಿನ ಒರಿಸ್ಸಾದ ಕಟಕ್ ನಗರದಲ್ಲಿ ತಂದೆ ಜಾನಕಿನಾಥ ಬೋಸ್ ತಾಯಿ ಪ್ರಭಾವತಿ ದೇವಿಯವರ ಪುತ್ರನಾಗಿ ಜನಿಸಿದರು. ಓದಿನಲ್ಲಿ ಪ್ರತಿಭಾವಂತರಾಗಿದ್ದ ಸುಭಾಷ್ ಚಂದ್ರ ಬೋಸ್ ರವರು 1913ರಲ್ಲಿ ಮೆಟ್ರ್ಯಕುಲೇಶನ್ ಪರೀಕ್ಷೆ ಪಾಸು ಮಾಡಿ 1919 ರಲ್ಲಿ ಕೊಲ್ಕತ್ತಾದ ಪ್ರಸಿಡೆನ್ಸಿ ಕಾಲೇಜಿನಲ್ಲಿ ತತ್ವಶಾಸ್ತ್ರ ಪಾಸು ಮಾಡಿದ್ದರು.

ಜಲಿಯನ್ ವಾಲಾಬಾಗ್‍ನ ದುರಂತ ಸುಭಾಷ್ ರಲ್ಲಿ ಸ್ವಂತ್ರ್ಯದ ಕಿಚ್ಚನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ರವರು ತಮ್ಮ ಮಗ ಎಲ್ಲಿ ಸ್ವಾತಂತ್ರ್ಯ ಹೋರಾಟದ ಹಾದಿ ಹಿಡಿಯುತ್ತಾನೋ ಎಂಬ ಭಯದಲ್ಲಿ ಅವರನ್ನು ಐ.ಎ.ಎಸ್ ಪರೀಕ್ಷೆ ಬರೆಯಲು ಇಂಗ್ಲೇಡಿಗೆ ಕಳುಹಿಸಿದರು. ಆ ಪರೀಕ್ಷೆಯಲ್ಲಿ 4ನೇ ರ್ಯಾಂಕ್‍ನಲ್ಲಿ ಪಾಸಾದ ಬೋಸ್ ರವರು ಬ್ರಿಟೀಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವತಂತ್ರ್ಯ ಚಳುವಳಿಗೆ ಧುಮುಕಿದರು. 

1940 ರಲ್ಲಿ ಬ್ರಿಟೀಷ್ ಸರ್ಕಾರ ಸುಬಾಷ ರವರನ್ನು 11ನೇ ಬಾರಿ ಜೈಲಿಗೆ ತಳ್ಳಿತು. ಇದೇ ಸಭಾಷ್ ರವರ ಕೊನೆಯ ಬಂಧನವಾಗಿತ್ತು. ತಮ್ಮನ್ನು ಬಿಡುಗಡೆಗೊಳಿಸುವಂತೆ ಜೈಲಿನಲ್ಲಿ ಉಪವಾಸ ಆರಂಭಿಸಿದರು. ಉಪವಾಸ ಮುಂದುವರೆದಂತೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಜೈಲಿನಲ್ಲಿ ಆಕಸ್ಮಿಕ ಸುಭಾಷ್ ರವರಿಗೆ ಏನಾದರೂ ಆದರೆ ಭಾರತಾಧ್ಯಂತ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂಬುವುದರ ಸ್ಪಷ್ಟ ಅರಿವು ಬ್ರಿಟೀಷರಿಗಿತ್ತು. ಆದ್ದರಿಂದ 1940 ರ ಡಿಸೆಂಬರ್‍ನಲ್ಲಿ ಅವರನ್ನು ಬಿಡುಗಡೆಗೊಳಿಸಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇತಿಹಾಸ ಉಪನ್ಯಾಸಕ ರತ್ನಪ್ಪ, ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧಾಯ ಚೌಡಪ್ಪ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ತಾಲೂಕು ಸಂಚಾಲಕ ನವೀನ್ ಕೆ.ಹೆಚ್, ಅರುಣ್, ಗಣೇಶ್, ಕೀರ್ತಿ ಕಾರ್ಯಕರ್ತರು, ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News