ಟ್ರೈಬಲ್ ಮೆಡಿಸಿನ್‍ಗೆ ಪ್ರಮುಖ ಆದ್ಯತೆ: ಡಾ.ಲಕ್ಷೀನಾರಾಯಣ ಶಣೈ

Update: 2018-01-23 17:35 GMT

ಮೈಸೂರು,ಜ.23: ಗಿರಿಜನರು ಉಪಯೋಗಿಸುವ ಗಿಡಮೂಲಿಕೆಗಳನ್ನು ಟ್ರೈಬಲ್ ಮೆಡಿಸಿನ್ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಮರ್ಶಿಸಿ ಅವರ ಉಪಯೋಗವನ್ನು ಜಗತ್ತಿಗೆ ಸಾರಬೇಕು ಎಂಬ ಪ್ರಮುಖ ವಿಷಯವನ್ನು ಇಟ್ಟುಕೊಂಡು ಹಲವು ವಿಷಯಗಳ ಬಗ್ಗೆ ಎರಡೂ ದಿನಗಳ ಕಾರ್ಯಗಾರದಲ್ಲಿ ಚರ್ಚಿಸಲಾಯಿತು ಎಂದು ಮೈಸೂರು ಆಯುರ್ವೇದ ಸಂಶೋಧನಾ ಸಂಸ್ಥೆ ಸಹಾಯಕ ನಿರ್ದೇಶಕ ಡಾ.ಲಕ್ಷೀನಾರಾಯಣ ಶಣೈ ತಿಳಿಸಿದರು.  

ಮೈಸೂರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಆವರಣದಲ್ಲಿ ನಡೆಯುತ್ತಿರುವ ಎರಡು ದಿನಗಳ “ದೃಷ್ಟಿ-ಸೃಷ್ಟಿ-2018” ಕಾರ್ಯಗಾರದ ನಂತರ ಮಂಗಳವಾರ  ಮಾಹಿತಿ ನೀಡಿದರು.

ಆಯುರ್ವೇದ ಸಂಶೋಧಾನ ಕೇಂದ್ರ ಮುಂದಿನ 20 ವರ್ಷಗಳಲ್ಲಿ ಯಾವ ಯಾವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಜನಪರವಾದ ಆರೋಗ್ಯ ಕಾರ್ಯಕ್ರಮವನ್ನು ಹೇಗೆ ನಡೆಸಬೇಕು ಮತ್ತು ಆಯುರ್ವೇದದ ಗುಣಮಟ್ಟ ಹಾಗು ಅದರ ಉಪಯೋಗವನ್ನು ಸುಲಭವಾಗಿ ಯಾವ ರೀತಿ ಜನರಿಗೆ ಮುಟ್ಟಿಸ ಬೇಕು ಎಂಬುದರ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ಹೇಳಿದರು.

ಖ್ಯಾತ ತಜ್ಞರಾದ ಡಾ.ಎಂ.ಎ.ಬಾಲಸುಬ್ರಮಣ್ಯಂ, ಮಕ್ಕಳ ತಜ್ಞರಾದ ಡಾ.ಕುಮಾರ್, ಬಯೋಕೆಮಿಸ್ಟ್ ದೇವಕಿ, ಡಾ.ಲ್ಯಾನ್ಸಿ ಡಿಸೋಜ, ಡಾ.ಅಹಲ್ಯ ಶರ್ಮ, ಡಾ.ರಾಜೇಂದ್ರ, ಹಾಗೂ ಡಾ.ಡೆನ್ನಿಸ್ ಶಿಭಿರಾರ್ಥಿಗಳಿಗೆ ಉತ್ತಮ ಮಾಹಿತಿಗಳನ್ನು ನೀಡಿದರು.

ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 90 ವೈದ್ಯರು ಸೇರಿದಂತೆ ಇತರರು ಭಾಗವಹಿಸಿದ್ದರು. ಅವರವರು ಗ್ರೂಪ್ ಚರ್ಚೆಗಳನ್ನು ನಡೆಸಿ ಅಯುರ್ವೇದ ಉಪಯೋಗಗಳನ್ನು ಮತ್ತು ಅವರು ಯಾವ ರೀತಿ ಸಂಶೋಧನೆ ನಡೆಸಿದ್ದಾರೆ ಎಂಬುದರೆ ಬಗ್ಗೆ ಚರ್ಚೆ ನಡೆಸಲಾಯಿತು.

ಆಯುರ್ವೇದ ಮುಂದಿನ 5 ವರ್ಷಕ್ಕೆ ಮತ್ತು 10 ವರ್ಷಕ್ಕೆ ಹೇಗಿರಬೇಕು, ನಾವು ಸಮಯೋಚಿತವಾಗಿ ಹೇಗೆ ಕೆಲಸಮಾಡಬೇಕು, ಹಾಗೂ ಸರ್ಕಾರದ ರೀತಿ ನೀತಿ ನಿರ್ಧಾರಗಳಿಗೆ ತಕ್ಕಂತೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಗಂಭೀರವಾಗಿ ಚರ್ಚಿಸಲಾಯಿತು. ಪ್ರಮುಖವಾಗಿ ಕಾಡು ಜನರು ವಾಸಿಸುವ ಕಡೆ ಟ್ರೈಬಲ್ ಮೆಡಿಸಿನ್ ಬಗ್ಗೆ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಮರ್ಶಿಸಿ ಅದರ ವೈಶಿಷ್ಟ್ಯವನ್ನು ಜಗತ್ತಿಗೆ ಸಾರಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News