ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ವ್ಯಾಪ್ತಿ ಮೀನುಗಾರಿಕೆ ನಿಷೇಧಿಸಿ: ಎನ್.ನಂದಕುಮಾರ್

Update: 2018-01-23 17:43 GMT

ಮದ್ದೂರು, ಜ.23: ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದ ಹಾಸುಪಾಸಿನ 10 ಕಿ.ಮೀ. ಹಾಗೂ ಶಿಂಷಾ ನದಿಯಲ್ಲಿ ಮೀನುಗಾರಿಕೆ ನಿಷೇಧಿಸುವಂತೆ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ನಂದಕುಮಾರ್ ಒತ್ತಾಯಿಸಿದ್ದಾರೆ.

ಮಂಗಳವಾರ ಪಕ್ಷಿಧಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಿಧಾಮಗಳಲ್ಲಿ ಕೆಲವು ತಿಂಗಳಿಂದ ಕೊಕ್ಕರೆಗಳು(ಪೆಲಿಕಾನ್) ಸಾವುನ್ನಪ್ಪುತ್ತಿರುವುದು ಆತಂಕಕಾರಿಯಾಗಿದೆ ಎಂದರು.

ಸ್ಥಳೀಯ ಜನರ ಪ್ರಕಾರ ಕೊಕ್ಕರೆಗಳ ಸಾವು ಮತ್ತು ಅಸ್ವಸ್ಥೆಗೆ ಆಹಾರ ಕೊರತೆ ಕಾರಣವೆನ್ನಲಾಗಿದ್ದು, ಆದ್ದರಿಂದ ಸುತ್ತಮುತ್ತ ಪ್ರದೇಶದಲ್ಲಿ ಜಿಲ್ಲಾಡಳಿತ ಮೀನುಗಾರಿಕೆ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.

ನಿಗಮದ ನಿರ್ದೇಶಕರಾದ ಕೆ.ಸಿ.ಪ್ರಕಾಶ್, ಎಂ.ಮಂಜುನಾಥ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ಸ್ವಾಮಿ, ಸದಸ್ಯ ಮೋಹನ್‍ಕುಮಾರ್, ತಾಪಂ ಮಾಜಿ ಸದಸ್ಯ ಭರತೇಶ್, ವಿಶ್ವಕರ್ಮ ಜನಾಂಗದ ಯುವ ಮುಖಂಡ ಮದ್ದೂರು ಸುರೇಶ್, ಬಿ.ಲಿಂಗೇಗೌಡ, ರವಿಪ್ರಸಾದ್, ಸಂತೋಷ್, ಸ್ವಾಮಿ, ಶೇಖರ್, ಮನು, ವೆಂಕಟೇಶ್, ಇತರರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News