×
Ad

ಚಾಮರಾಜನಗರ: ಸುಭಾಷ್ ಚಂದ್ರ ಬೋಸ್ ರ ಜನ್ಮ ದಿನ ಆಚರಣೆ

Update: 2018-01-24 16:48 IST

ಚಾಮರಾಜನಗರ,ಜ.24: ನಗರದ  ಜೈಹಿಂದ್ ಪ್ರತಿಷ್ಠಾನದ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ರ ಜನ್ಮ ದಿನದ ಅಂಗವಾಗಿ ನೇತಾಜಿ  ಹೆಸರಿನಲ್ಲಿ ನಿರ್ಮಿಸಿರುವ ಜೈಹಿಂದ್ ಕಟ್ಟೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ರಾಷ್ಟ್ರ ಘೋಷಣೆಯಾದ ಜೈಹಿಂದ್ ಸೆಲ್ಯೂಟ್ ನೀಡಿ ಗೌರವ ಸಲ್ಲಿಸಲಾಯಿತು. 

ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಭಾರತದ ಸ್ವಾತಂತ್ರ್ಯಚಳವಳವಲ್ಲಿ ಭಾರತೀಯ ರಾಷ್ಟ್ರೀಯ ಸೇನೆ ಐಎನ್‍ಎ ಮೂಲಕ ಬ್ರಿಟಿಷರ ವಿರುದ್ದ ಹೋರಾಡಿದ ರಾಷ್ಟ್ರವೀರ ನೇತಾಜಿ ಸುಭಾಷ್‍ಚಂದ್ರ ಬೋಸ್ ಅಪ್ರತಿಮೆ ದೇಶಭಕ್ತರಾಗಿದ್ದಾರೆ. ಇಂದಿನ ಮಕ್ಕಳಿಗೆ, ಯುವಕರಿಗೆ ಅವರ ಬಗ್ಗೆ  ತಿಳಿಸುವ ಕಾರ್ಯವಾಗಬೇಕು. ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ನೇತಾಜಿಯವರ ಜೊತೆಗೆ ಹೋರಾಡಿದ ಚಾಮರಾಜ ನಗರ ಘಟ್ಟವಾಡಿ ಎಎನ್‍ಎ ರಾಮರಾವ್ ಹಾಗು ಝೂನ್ಸಿ ಪಡೆಯ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್‍ರವರ ಹೋರಾಟ ಇದಕ್ಕೆ ಸಾಕ್ಷಿಯಾಗಿದೆ. ನೇತಾಜಿ ಸೇನೆಯಲ್ಲಿ ಮಹಿಳಾ ಪಡೆ ನಿರ್ಮಿಸಿ, ಶಕ್ತಿ ತುಂಬಿದವರು. ನೇತಾಜಿಯ ತೇಜಸ್ಸು, ಧೈರ್ಯ ಸಾಹಸ, ರಾಷ್ಟ್ರಪ್ರೇಮ ನಮಗೆಲ್ಲಾ ಆದರ್ಶವಾಗಬೇಕು ಎಂದರು.

ನೇತಾಜಿಯವರ ಭಾವಚಿತ್ರಕ್ಕೆ ಪತ್ರಿಕಾ ವಿತರಕರಾದ  ಬಿ.ಕೆ. ಮಂಜುನಾಥ್ ಆರಾಧ್ಯ ಪುಷ್ಟನಮನ ಸಲ್ಲಿಸಿ, ಉದ್ಘಾಟಿಸಿದರು. ವಿಪ್ರ ಪದವೀಧರ ಸಂಘದ ನಾಗಸುಂದರ್, ಜೈಹಿಂದ್  ಪ್ರತಿಷ್ಠಾನದ ಕುಸುಮಋಗ್ವೇದಿ,  ಸುಲೋಚನಮ್ಮ, ಝೂನ್ಸಿ ಮಕ್ಕಳ ಪರಿಷತ್‍ನ ಸದಸ್ಯರು ಭಾಗಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News