ದಾವಣಗೆರೆ: ಕನ್ನಡಪರ ಸಂಘಟನೆಗಳಿಂದ ಬೈಕ್ ರ್ಯಾಲಿ
ದಾವಣಗೆರೆ,ಜ.24: ಕಳಸಾ ಬಂಡೂರಿ ಹಾಗೂ ಮಹದಾಯಿ ಜಾರಿಗೆ ಒತ್ತಾಯಿಸಿ ಜ.25 ರಂದು ಕರ್ನಾಟಕ ಬಂದ್ ಅಂಗವಾಗಿ ಕನ್ನಡಪರ ಸಂಘಟನೆಗಳು ಬುಧವಾರ ನಗರದಲ್ಲಿ ಜಯದೇವ ವೃತ್ತದಿಂದ ಬೈಕ್ ರ್ಯಾಲಿ ನಡೆಸಿದರು.
ನಗರದ ಜಯದೇವ ವೃತ್ತದಿಂದ ಆರಂಭಗೊಂಡ ಬೈಕ್ ರ್ಯಾಲಿಯು ಆಶೋಕ ರಸ್ತೆ, ಮಂಡಿಪೇಟೆ, ವಸಂತ ಟಾಕೀಸ್, ರೇಣುಕಾ ಮಂದಿರ, ಅಂಡರ್ ಪಾಸ್ ರಸ್ತೆ,, ಎವಿಕೆ ಕಾಲೇಜು ರಸ್ತೆ, ಚೇತನ ಹೋಟೆಲ್, ಅಂಬೇಡ್ಕರ್ ವೃತ್ತ, ನಿಟ್ಟುವಳ್ಳಿ, ಕೆಟಿಜೆ ನಗರ ಮಾರ್ಗವಾಗಿ ಪುನಃ ಜಯದೇವ ವೃತ್ತ ಬಂದು ತಲುಪಿತು.
ಕುರುನಾಡ ಸಮರ ಸೇನೆ, ಕರ್ನಾಟಕ ನವ ನಿರ್ಮಾಣ ಸೇನೆ, ಕನ್ನಡ ಚಳುವಳಿ ಕೇಂದ್ರ, ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ), ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ, ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ), ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ), ಸುರ್ವಣ ಕರ್ನಾಟಕ ವೇದಿಕೆ, ಡಾ.ರಾಜ್ ಅಭಿಮಾನಿಗಳ ಸಂಘದಿಂದ ಬಂದ್‍ಗೆ ಸಾಥ್ ನೀಡಲಾಗಿದೆ.
ಈ ವೇಳೆ ಐಗೂರು ಸುರೇಶ್, ಅವಿನಾಶ್, ಸಂತೋಷ್ ಕುಮಾರ್, ವೆಂಕಟೇಶ್, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಉಮಾ ತೋಟಪ್ಪ, ಜಬೀವುಲ್ಲಾ ಖಾನ್, ಇಂಬ್ರಾನ್ ಜಾಲಿಕಟ್ಟಿ, ಲಿಂಗಾಪುರದ ಬಸವರಾಜ್ ಮತ್ತಿತರರು ಇದ್ದರು.