×
Ad

ಕಡೂರು: ಕೋಟೆ ಚನ್ನಕೇಶವ ದೇವಾಲಯದಲ್ಲಿ ರಥೋತ್ಸವ

Update: 2018-01-24 23:16 IST

ಕಡೂರು, ಜ.24: ಪಟ್ಟಣದ ಕೋಟೆ ಬಡಾವಣೆಯಲ್ಲಿರುವ ಚನ್ನಕೇಶವ ದೇವಾಲಯದಲ್ಲಿ ರಥಸಪ್ತಮಿ ಅಂಗವಾಗಿ ವಿಶೇಷ ಪೂಜೆ ಹಾಗೂ ರಥೋತ್ಸವವನ್ನು ನೆರವೇರಿಸಲಾಯಿತು. ಮುಜರಾಯಿ ಇಲಾಖೆ ವತಿಯಿಂದ ಆಡಳಿತ ನಡೆಸುತ್ತಿರುವ ಈ ದೇವಾಲಯದಲ್ಲಿ ಪ್ರತಿ ವರ್ಷ ರಥಸಪ್ತಮಿ ಅಂಗವಾಗಿ ರಥೋತ್ಸವ ನಡೆಯುತ್ತಿದೆ. 

ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಡಿ.ರಾಜನ್ ನೇತೃತ್ವದಲ್ಲಿ, ಭಕ್ತಸಮೂಹದೊಂದಿಗೆ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರದೊಂದಿಗೆ ದೇವಾಲಯದಿಂದ ಪ್ರಾರಂಭವಾಗಿ ಕೋಟೆಯ ಪ್ರಮುಖ ಬೀದಿಗಳಲ್ಲಿ ಒಂದು ಸುತ್ತು ರಥ ಆಗಮಿಸಿತು. ನಂತರ ವಿಶೇಷವಾಗಿ ದೇವರಿಗೆ ಮಹಾ ಮಂಗಳಾರತಿಯೊಂದಿಗೆ ಮುಕ್ತಾಯಗೊಂಡಿತು. 

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ದಿವಾಕರ್, ಹೆಚ್.ಎನ್.ಶಿವಶಂಕರ್, ಟಿ.ಎಲ್.ರಾಘವೇಂದ್ರ, ಕೃಷ್ಣಮೂರ್ತಿ ಜೋಷಿ, ದತ್ತಾತ್ರಿ, ಅಂಬಾಜಿರಾವ್, ಸಿ.ಎಸ್.ವೆಂಕಟೇಶ್, ಲಕ್ಷ್ಮೀನಾರಾಯಣ್, ಜಯರಾಂ, ಸಿ.ವಿ.ಶ್ರೀನಿವಾಸ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News